ಶಿವಯೋಗೀಶ್ವರ ಜಾತ್ರಾ ಮಹೋತ್ಸವದಲ್ಲಿ ಆಧ್ಯಾತ್ಮಿಕ ಪ್ರವಚನ
Spiritual discourse at the Shiva Yogishwar Jatra festival
ಲೋಕದರ್ಶನ ವರದಿ
ಯರಗಟ್ಟಿ 29: ಮನುಷ್ಯ ಜೀವನದಲ್ಲಿ ಚಿಂತೆಯನ್ನು ಬಿಟ್ಟು ಚಿಂತನ ಮಾಡಬೇಕು ಎಂದು ಹರ್ಲಾಪೂರ ಹರ್ತಿಮಠದ ವೇ.ಮೂರ್ತಿ ಸದಾನಂದ ಶಾಸ್ತ್ರಿಗಳು ಹೇಳಿದರು. ಸಮೀಪದ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ರಥದ ಲೋಕಾರೆ್ಣ, ಆಧ್ಯಾತ್ಮಿಕ ಪ್ರವಚನ, ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಹುಟ್ಟಿನಿಂದ ಚಟ್ಟದವರೆಗೂ ಎಲ್ಲರೂ ಚಿಂತೆಯನ್ನು ಮಾಡುವವರೆ ಮಹಾತ್ಮರ ಚಿಂತೆ ನಮ್ಮನ್ನ ಕಾಯುತ್ತದೆ ಗಂಡ ಹೆಂಡತಿ ಇರುವ ತನಕ ಹೊಂದಾಣಿಕೆಯಿಂದ ಇರಬೇಕು ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಒತ್ತಡ ಜೀವನದಿಂದಾಗಿ ಜನರು ದುಶ್ಚಟಗಳಿಗೆ ದಾಸರಾಗಿ ಅರೋಗ್ಯ ಹಾಳುಮಾಡಿಕೊಳ್ಳುತ್ತಿದ್ದರೆ. ಶರಣರ, ದಾಸರ ವಚನಗಳು, ತತ್ವಪದಗಳನ್ನು ಆಲಿಸಬೇಕು ಎಂದರು. ವೇ.ಮೂ ಚಂದ್ರಯ್ಯ ಹಿರೆಮಠ, ಸಿದ್ದೇಶಕುಮಾರ ಹೊಳಲ, ಮಾಜಿ ಕೆಎಂಎಫ್ ಅಧ್ಯಕ್ಷ ಎಸ್.ಎಸ್.ಮುಗಳಿ, ಮುಖಂಡ ಸಿದ್ದಪ್ಪಾ ನಾಶಿಪೂಡಿ, ಬಸವಣ್ಣೆಪ್ಪ ದೊಡಲಿಂನವರ, ಸಂಗ್ರಾಮ ಗೌಡರ, ಪ್ರದೀಪ ಹಳೇಮನಿ, ಬಸವರಾಜ ಸಣ್ಣಗೌಡ್ರ, ಶಿವಪ್ಪ ಸಣ್ಣಗೌಡ್ರ, ಸಿದ್ದು ಜಗದಾಳೆ ಮತ್ತಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 