ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ

ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ Special prayer for the arrival of rain

ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ  

ತಾಳಿಕೋಟೆ 13 : ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಮಳೆರಾಜನ ಸ್ವಾಗತಕ್ಕಾಗಿ ಶುಕ್ರವಾರ ಸಂಜೆ ವಿಶೇಷ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಕಳೆದ ಎರಡು ದಿನಗಳಿಂದ ನಡೆಸಿಕೊಂಡು ಬಂದ ಜಪ ಯಜ್ಞವನ್ನು ಮಂಗಲ ಮಾಡಲಾಯಿತು.ಈ ವಿಶೇಷಜಪ ಯಜ್ಞದಲ್ಲಿ ಶರಣೇ ಶಾಂತಮ್ಮ ತಾಯಿ ಕೊಳೂರ, ಪೂಜ್ಯ ಸಿಎಂ ಹಿರೇಮಠ, ಎಸ್ ಎಮ್ ಬೆನಾಳಮಠ, ಶಿವಕುಮಾರ ಹಿರೇಮಠ, ಶರಣೆ ಕಾಶಿಬಾಯಿ ಬಂಟನೂರ, ನೀಲಮ್ಮ ಪಾಟೀಲ, ದ್ರಾಕ್ಷಾಯಿಣಿ ಹಿಪ್ಪರಗಿ, ಸುನಂದ ನೀರಲಗಿ, ಗೌರಮ್ಮ ಪಾಟೀಲ, ಸುಮಂಗಲಾ ಕೋಳುರ, ಪಾರ್ವತಿ ಮದರ್ಕಲ್, ವಿಜಯಲಕ್ಷ್ಮಿ ಕೆಸರಬಾವಿ, ರಾಜೇಶ್ವರಿ ಪಾಟೀಲ, ಮಾಲಾ ಚೌದರಿ, ದೀಪಾ ಹಿರೇಮಠ, ಕಸ್ತೂರಬಾಯಿ ಪ್ಯಾಟಿ, ದೇವಿಂದ್ರ​‍್ಪ ಬಡಿಗೇರ, ಬಿ ಎಸ್ ದ್ಯಾಪುರ, ಬಸವರಾಜ ಮದರಕಲ್, ಪ್ರವೀಣ ರಡ್ಡಿ ,ಶಶಿಧರ ಯಾತಗಿರಿ, ಸತೀಶ ಕುಲಕರಣಿ, ಶಶಿಧರ ಕೆಸರಭಾವಿ ಮತ್ತಿತರರು ಇದ್ದರು.