ಹುಲಗೂರ ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುಧಾನ : ಪಠಾಣ

Special attention for the development of Hulagur G.P. roads: Pathana

ಹುಲಗೂರ ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುಧಾನ : ಪಠಾಣ

ಶಿಗ್ಗಾವಿ 06 : ಹುಲಗೂರ ಜಿಪಂ ಕ್ಷೇತ್ರದವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಹಂತವಾಗಿ 3 ಮೊದಲ ಕೋಟಿ ವೆಚ್ಚದಲ್ಲಿ ಪಾಣಿಗಟ್ಟಿ-ಹುಲಗೂರ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 58 ಲಕ್ಷ ರೂ.ಗಳಲ್ಲಿ ಪಾಣಿಗಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದಾಗಿ ಶಾಸಕ ಯಾಸೀರಖಾನ್ ಪಠಾಣ ಹೇಳಿದರು.  ತಾಲೂಕಿನ ಪಾಣಿಗಟ್ಟಿ ಹುಲಗೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ 15ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹುಲಗೂರ ಗ್ರಾಪಂ ಸಭೆ ಸಭಾಂಗಣ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಬೆಳವಣಿಗೆ ಮತ್ತು ವ್ಯಾಪಾರ ವಹಿವಾಟುಗಳು ಹೆಚ್ಚಳವಾಗಲಿದೆ. ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಲೋಕೋಪಯೋಗಿ ಮಂಜೂರಾತಿಗೆ ಸಚಿವರಿಗೆ ಹುಲಗೂರ ಗ್ರಾಪಂ ಸಭೆ ಸಭಾಂಗಣ ಕೊಠಡಿ ಉದ್ಘಾಟನೆಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಈಗಾಗಲೇ ಪಟ್ಟಿ ಮಾಡಿದ್ದೇನೆ. ಕಾಲಾವ ಕಾಶ ಕೊಡಿ ಎಲ್ಲವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.  ಸ್ಥಳೀಯವಾಗಿ ಗ್ರಾಪಂ ಆಡಳಿತ ಮಂಡಳಿ ಮತ್ತು ಜನರು ನನ್ನೊಂದಿಗೆ ಕೈಜೋಡಿಸಿ ಸಹಕಾರ ನೀಡಿದಲ್ಲಿ ಸಮಸ್ಯೆ ರ್ಮು ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಆಡಳಿತ ಕೊಂಡೊಯ್ಯುತ್ತಿದ್ದೇನೆ. ತಮ್ಮ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಪಠಾಣ ಕೋರಿದರು. ಮುಖಂಡರಾದ ಗುಡ್ಡಪ್ಪ ಜಲದಿ, ಮಾಲತೇಶ ಸಾಲಿ, ಎಸ್‌.ಎಫ್‌.ಮಣಕಟ್ಟಿ, ಅಶೋಕ ಓಲೇಕಾರ ಸೇರಿದಂತೆ ಗ್ರಾಪಂ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು.