ಹಾಲಿ ಮಾಜಿ ಶಾಸಕರ ಭಾಷಣ ಸಮಯದಲ್ಲಿ ಜಟಾಪಟಿ

Chaos during the speech of a sitting and former MLA

ಜಮಖಂಡಿ 06: ಜಿಲ್ಲಾ ಉಸ್ತುವರಿ ಸಚಿವ ಆರ್,ಬಿ,ತಿಮ್ಮಾಪೂರ ಮುಂದೆ ಹಾಲಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಷಣ ಸಮಯದಲ್ಲಿ ಜಟಾಪಟಿ ನಡೆಯಿತು. 

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (ಪ.ಜಾ) ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು. 

ಕೊಣ್ಣುರ ಮಡ್ಡಿಪ್ಲಾಟ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ. ವಂಚಿತರಾಗಿದ್ದರು. ಅಲ್ಲಿರುವ ಜನರಿಗೆ ವಿದ್ಯುತ್‌ಯಿಲ್ಲದೆ ಇದ್ದರು. ಸಾಕಷ್ಟು ಬಾರಿ ಜನಪ್ರತಿನಿಧಿಗಳ ಹತ್ತಿರ ಹೋಗಿ ಮನವಿ ಮಾಡಿದರು. ಆದರೆ ಅವರ ಯಾವುದೆ ಕೆಲಸ ಕಾರ್ಯಗಳು ಆಗಲ್ಲಿಲ್ಲ. ಮರಳಿ ನನ್ನ ಬಳಿ ಬಂದು ತಮ್ಮ ಅಳಲನ್ನು ತೊಡಿಕೊಂಡರು. ನಾನು ಗ್ರಾಮಕ್ಕೆ ಆಗಮಿಸಿ. ಸಭೆಯನ್ನು ಮಾಡಿ. ಅಲ್ಲಿರುವ ಪಿಡಿಒ ಹಾಗೂ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಅಲ್ಲಿನ ಸಮಸ್ಯೆಯನ್ನು ಬಗ್ಗೆ ಹರಿಸುವ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು. 

ವೇದಿಕೆಯಲ್ಲಿ ಕುಳಿತಿದ್ದ ಹಾಲಿ ಶಾಸಕ ಜಗದೀಶ ಗುಡಗುಂಟಿ ಮತ್ತೇ ಎದ್ದು ಹೋಗಿ ಮೈಕ್ ಹಿಡಿದು. ನಾನು ಬ್ಯಾನರ್‌ಗಳಲ್ಲಿ ಪೋಜು ಕೊಡುವ ವ್ಯಕ್ತಿ ಅಲ್ಲ. ನಾನು ಅಭಿವೃದ್ಧಿ ಮಾಡುವವನ್ನು. ಅವರು ಸುಳ್ಳು ಹೇಳುತ್ತಿದ್ದಾರೆ. ನಾನು ನನ್ನ ಸ್ವಂತ ಹಣ 8 ಲಕ್ಷ ರೂ,ಗಳನ್ನು ಖರ್ಚು ಮಾಡಿ ವಿದ್ಯುತ್ ಕೊಡಿಸಿದ್ದೇನೆ. ಕೇಳಿ ಜನರನ್ನು ಎಂದು ಜೊರ ಧ್ವನಿಯಲ್ಲಿ ಹೇಳಿದರು. ಅಷ್ಟರಲ್ಲಿ ಕೆಲವರು ಹೌದು ಎನ್ನುತ್ತಿದ್ದರು. ಕೆಲವರು ತಮ್ಮ ಬೇಕಾದವರಿಗೆ ಅಷ್ಟೇ ಕೊಡಿಸಿದ್ದಾರೆ ಎಂದು ಜನರು ಕೂಗಾಟ-ಜಿರಾಟ ನಡೆಸಿದರು. ವೇದಿಕೆಯಲ್ಲಿ ಹಾಲಿ ಶಾಸಕ ಜಗದೀಶ ಗುಡಗುಂಟಿ ಬೆಂಬಲಿಗರು ಸಾಥ ನೀಡುತ್ತಿದ್ದರು.  

ವೇದಿಕೆಯಲ್ಲಿ ಕುಳಿತಿದ್ದ ಸಚಿವ ತಿಮ್ಮಾಪೂರ ತಕ್ಷಣ ಎದ್ದು. ಮೈಕ್ ಹಿಡಿದ್ದು. ಸುಮ್ಮನೆ ಇರ​‍್ಪ. ಯಾಕೆ ಚಿರಾಡುತ್ತಿದ್ದಿರಿ. ಸುಮ್ಮಯಿರಿ ಎಂದು ಸಮಾಧಾನ ಪಡಿಸುತ್ತಿದ್ದರು. 

ಮಾಜಿ ಶಾಸಕನ ಬೆಂಬಲಿಗರು ಹಾಗೂ ಹಾಲಿ ಶಾಸಕನ ಬೆಂಬಲಿಗರು ಕೂಗಾಟ, ಚಿರಾಟ ಮಾಡುತ್ತಿದ್ದಂತೆ ಮಧ್ಯ ಪೋಲಿಸರು ಪ್ರವೇಶಿಸಿದರು. ಸಚಿವರು ಎಲ್ಲರನ್ನು ಸಮಾಧಾನ ಪಡಿಸಿದರು. 

ಸಚಿವ ಆರ್,ಬಿ,ತಿಮ್ಮಾಪೂರ ಮಾತನಾಡಿ, ನಿಮ್ಮ, ನಿಮ್ಮ ವ್ಯಯಕ್ತಿ ಜಗಳವನ್ನು ವೇದಿಕೆಯಲ್ಲಿ ಹಂಚಿಕೊಳ್ಳಬಾರದು. ನೀವುಗಳು ಜನರ ಪರವಾಗಿ ಕೆಲಸ ಮಾಡಬೇಕು ಹೊರತು. ನನ್ನ ಅವಧಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ನೀನು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅದು ಚುನಾವಣೆ ಸಮಯದಲ್ಲಿ ಹೇಳಿಕೊಳ್ಳಬೇಕು.ಇದು ಸರಕಾರದ ಕೆಲಸವಾಗಿದೆ. ವಸತಿ ಶಾಲೆಗೆ ಮಾಜಿ ಸಚಿವ ಕಾರಜೋಳ, ಮಾಜಿ ಶಾಸಕ ನ್ಯಾಮಗೌಡ ಅಡಿಗಲ್ಲು ಮಾಡಿದರು. ಉದ್ಘಾಟನೆ ತಿಮ್ಮಾಪೂರ ಮತ್ತು ಶಾಸಕ ಗುಡಗುಂಟಿ ಮಾಡಿದರು. ಜನಪ್ರತಿನಿಧಿಗಳು ನಾವು ನಾನು ಕಟ್ಟಿಸಿದೆ ಎಂದು ಹೇಳಿಕೊಳ್ಳಬಾರದು. ಅದು ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಇದು ಸರಕಾರ ಇಂತಹ ದೊಡ್ಡ ಬಿಲ್ಡಿಂಗ್ ಕಟ್ಟಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಮಾಡಬೇಕು ಎಂದರು. 

ಆಮಂತ್ರಣ ಪತ್ರಿಕೆಯಲ್ಲಿ ಇರುವ ಗಣ್ಯಮಾನ್ಯರು ಯಾರು ಬರದೇ. ಕೇವಲ ಸಚಿವರು ಹಾಗೂ ತಾಲೂಕಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷ,ಉಪಾಧ್ಯಕ್ಷ,ಸದ್ಯಸರು ಮಾತ್ರ ಇದ್ದರು, ಇನ್ನೂಳಿದ ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಗೈರು ಉಳಿದಿದ್ದರು. 

ಕುರ್ಚಿಗಳು ಖಾಲಿ ಖಾಲಿ ; ಡಾ.ಬಿ.ಆರ್‌.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (ಪ.ಜಾ) ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ವೇದಿಕೆ ಮುಂಭಾಗದಲ್ಲಿ ಕುರ್ಚಿಗಳು ಖಾಲಿ,ಖಾಲಿ ಇದ್ದವು. ಕೆಲವಂದಿಷ್ಟು ಜನರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ಗ್ರಾಮದ ಜನತೆ ಹೆಚ್ಚಿನ ಸಖ್ಯೆಯಲ್ಲಿ ಇರಲ್ಲಿಲ್ಲ. ವಸತಿ ಶಾಲೆಯಗೆ ಸಂಬಂಧಪಟ್ಟ ಅಧಿಕಾರಿಗಳು ಯಾವ ಕೆಲಸ ಮಾಡಬೇಕು. ಎನ್ನು ಮಾಡಬೇಕು ಎಂಬುವುದು ತಿಳಿಯದೆ ಗಡಬಡಿಸುತ್ತಿದ್ದರು. ಗ್ರಾಮದ ಕೆಲ ಮುಖಂಡರು ವೇದಿಕೆಯಲ್ಲಿ ಇದ್ದರು. ನಿರೂಪಣೆ ಮಾಡುತ್ತಿದ್ದ ಶಿಕ್ಷಕಿಯರು ನಿರೂಪನೆ ಮಾಡುತ್ತಾ ಮೈಕ್‌ನಲ್ಲಿ ಹರಟೆ ಮಾಡುತ್ತಾ ನಗುತ್ತಿರುವದು ಸಾಮಾನ್ಯವಾಗಿತ್ತು. 

ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಹಾಗೂ ಮಾಜಿ ಶಾಸಕ :  

ಡಾ.ಬಿ.ಆರ್‌.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (ಪ.ಜಾ) ನೂತನ ಕಟ್ಟಡಕ್ಕೆ ಜಾಗೆಯನ್ನು ನೀಡಿದ ದೇಸಾಯಿ ಕುಟುಂಬವನ್ನು ಮರೆತು. ತಾರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಸಂಬಂಧಪಟ್ಟ ಅಧಿಕಾರಿಗಳನ್ನು ಸಚಿವ ಆರ್,ಬಿ,ತಿಮ್ಮಾಪೂರ ಹಾಗೂ ಮಾಜಿ ಶಾಸಕ ನ್ಯಾಮಗೌಡ ತರಾಟೆಗೆ ತೆಗೆದುಕೊಂಡರು. 

ಸಚಿವ ಆರ್,ಬಿ, ಮಾತನಾಡಿ, ಇಷ್ಟೋಂದು ದೊಡ್ಡ ಕಟ್ಟಡಕ್ಕೆ ಭೂಮಿಯನ್ನು ದಾನ ಮಾಡಿದ ದೇಸಾಯಿ ಅವರನ್ನು ಮರೆತರೆ ಹೇಗೆ. ಅವರನ್ನು ಕರೆದು ಸನ್ಮಾನಿಸಬೇಕು.ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಕು. ಈ ನೂತನ ಕಟ್ಟಡದ ಅಡಿಗಲ್ಲಿನಲ್ಲಿ ದಾನ ಮಾಡಿದವರ ಹೆಸರು ಹಾಕಿ. ಮತ್ತೇ ಯಾರು ಇದ್ದಕ್ಕೆ ಶ್ರಮ ಪಟ್ಟಿದ್ದಾರೆ ಅವರ ಹೆಸರುಗಳನ್ನು ಹಾಕಬೇಕು. ಇವಾಗ ಇರುವ ಅಡಿಗಲ್ಲು ತೆಗೆದು ಬೇರೆ ಅಡಿಗಲ್ಲು ಹಾಕಬೇಕೆಂದು ಸಚಿವ ಆರ್,ಬಿ, ಖಡಕ್ಕಾಗಿ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು. 

ಕಲ್ಯಾಣ ಹೊರಗೀನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಕರಿಸಿದ್ದೇಶ್ವರ ಗದ್ದಿಗೆ ಪೂಜಾರಿ ಸಾನ್ನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಎಸಿ ಶ್ವೇತಾ ಬೀಡಿಕರ, ಗ್ರಾಪಂ ಅಧ್ಯಕ್ಷ ಬಾಗವ್ವ ಅಗಸರ, ಸಿದ್ದಪ್ಪ ಎಣ್ಣಿ, ಅಜಯ ಕಡಪಟ್ಟಿ, ಮಹೀಬೂಬ ಪೆಂಡಾರಿ, ಯಮನೂರ ಮೂಲಂಗಿ, ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಬಿ.ಎನ್‌.ಗಸ್ತಿ, ಸದುಗೌಡ ಪಾಟೀಲ, ಮುದಕಣ್ಣ ಅಂಬೀಗರ, ಅಶೋಕ ಕಿವಡಿ, ಸಂಗಪ್ಪ ಎಮ್ಮಣ್ಣವರ, ತಾಪಂ ಇಓ ಸಂಜಿವ ಜುನ್ನೂರ, ಚಿನ್ನು ಅಂಬಿ, ಅಬುಬಕರ ಕುಡಚಿ, ಗ್ರಾಪಂ ಸದಸ್ಯರು ಇತರರು ಇದ್ದರು. ಶಾಲಾ ಶಿಕ್ಷಕರು ನಾಡಗೀತೆ ಹಾಡಿದರು. ಆರ್‌.ಎಂ.ಹೊಸಮನಿ ಸ್ವಾಗತಿಸಿದರು. ಶಿಕ್ಷಕಿ ರಾಣಿ ಕವಿ ನಿರೂಪಿಸಿದರು. ಪ್ರಾಂಶುಪಾಲ ಶಶಿಧರ ಕಡಿಬಾಗಿಲ ವಂದಿಸಿದರು.