ಸೊಮೈಯಾ ಶಾಲೆಗೆ ರೋಪ್ ಸ್ಕಿಪ್ಪಿಂಗ್ ನಲ್ಲಿ 18 ಚಿನ್ನದ ಪದಕ, ಚಾಂಪಿಯನ್ಸ್ ಟ್ರೋಫಿ
Somaiya School wins 18 gold medals and Champions Trophy in rope skipping
ಸಮೀರವಾಡಿ: ಇತ್ತೀಚೆಗೆ ವಿಜಯಪುರದ ಡಾ. ಬಿ.ಆರ್ ಅಂಬೆಂಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ರೋಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಸಮೀಪದ ಸಮೀರವಾಡಿಯ ಸೋಮೈಯಾ ಶಿಶು ನಿಕೇತನ ಹಾಗೂ ವಿನಯ ಮಂದಿರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ರೋಪ್ ಸ್ಕಿಪ್ಪಿಂಗ್ ಅಸೋಶಿಯೇಶನ್ ಹಾಗೂ ಫ್ರೀ ಸ್ಟೈಲ್ ರೋಪ್ ಸ್ಕಿಪ್ಪಿಂಗ್ ಅಸೋಸಿಯೇಷನ್ ವಿಜಯಪುರ ಇವರ ಸಹಯೋಗದಲ್ಲಿ ನಡೆದ ಚಾಂಪಿಯನ್ಸ್- 2025 ಸ್ಪರ್ಧೆಯಲ್ಲಿ ಸೋಮೈಯಾ ಶಾಲೆಯ ವಿದ್ಯಾರ್ಥಿಗಳು 18 ಚಿನ್ನ 16 ಬೆಳ್ಳಿ , 12 ಕಂಚಿನ ಪದಕ ಮತ್ತು ಟ್ರೋಫಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸದಸ್ಯ ಡಾ.ವ್ಹಿ.ಪಿ ಕಣವಿ, ಅವಳಿ ಶಾಲೆಯ ಮುಖ್ಯಾಧ್ಯಾಪಕ ಬಿ.ಡಿ.ನ್ಯಾಮಗೌಡ ಮತ್ತು ವ್ಹಿ. ಎಚ್.ಭಜಂತ್ರಿ ಅಭಿನಂದಿಸಿದ್ದಾರೆ.
ದೈಹಿಕ ಶಿಕ್ಷಕರಾದ ಮಹಾಂತೇಶ ಪುರವಂತ, ಬಸವರಾಜ ಕುರಾಡೆ ಮತ್ತು ಸುರೇಶ ಬೂದಿಹಾಳ ತರಬೇತಿ ನೀಡಿದ್ದಾರೆ.
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಕ್ರೀಡಾ ಸಾಧನೆಗಳನ್ನು ಹೆಚ್ಚಿಸಿ, ನಮ್ಮ ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡುತ್ತಿದ್ದಾರೆ, ಈ ಸಾಧನೆಯು ಆಡಳಿತ ಮಂಡಳಿಗೆ ಖುಷಿ ತಂದಿದೆ : ಡಾ. ವ್ಹಿ.ಪಿ.ಕಣವಿ ,
ಶಾಲಾ ಆಡಳಿತ ಮಂಡಳಿಯ ಸದಸ್ಯ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 