ಮಣ್ಣಿನ ಆರೋಗ್ಯ ಪರೀಕ್ಷೆ ಬಹುಮುಖ್ಯ: ಡಾ. ಜೋಶಿ

ಮುಧೋಳ ಏ 25: ಮಣ್ಣು ಪರೀಕ್ಷೆ ನಡೆಸಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ಲವಣಾಂಶ ನೀಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ, ಮನುಷ್ಯನ ಆರೋಗ್ಯದಂತೆ ಮಣ್ಣಿನ ಆರೋಗ್ಯ ಪರೀಕ್ಷೆ ಕೂಡ ಮುಖ್ಯವಾಗಿದೆ ಎಂದು ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ ಆಂಡ್ ಕೆಮಿಕಲ್ಸ್‌ ಕೇನ್ ವಿಭಾಗದ ಡಿಜಿಎಂ ಡಾ.ಎಸ್‌.ಎನ್‌.ಜೋಶಿ ಹೇಳಿದರು. 

ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಕ್ರೈಟೇರಿಯಾ 7ರ ಬೆಸ್ಟ್‌ ಪ್ರಾ-್ಯಕ್ಟಿಸ್ ಕಮಿಟಿ ವತಿಯಿಂದ ಬುಧವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಪರೀಕ್ಷಾ ವರದಿ ಕುರಿತು ರೈತರು ಮತ್ತು ವಿದ್ಯಾರ್ಥಿಗಳೊಂದಿಗೆ ನಡೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ ಮನುಷ್ಯನ ಆರೋಗ್ಯದಂತೆ ಮಣ್ಣಿನ ಆರೋಗ್ಯವು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ರೈತರು ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಭೂಮಿಯ ಫಲವತ್ತತೆ ಹಾಳಾಗದಂತೆ ನೋಡಿಕೊಳ್ಳಬೇಕಾದರೆ ಅನಾವಶ್ಯಕ ರಾಸಾಯನಿಕ ಗೊಬ್ಬರ ಹಾಕಬಾರದು. ಎಷ್ಟು ಅವಶ್ಯಕತೆ ಇದೆ ಅಷ್ಟೇ ರಸಗೊಬ್ಬರನ್ನು ಹಾಕಬೇಕು. ಉತ್ತಮ ಗುಣಮಟ್ಟದ ಬೀಜಗಳನ್ನೇ ಬಿತ್ತಬೇಕು. ಕ್ರೀಮಿನಾಶಕ ಓಷಧಿ ಬಳಸುವಾಗ ಕೃಷಿ ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ಬೆಳೆಗೆ ತೊಂದರೆ ಆಗದಂತೆ ನೀರು ಹರಿಸಬೇಕು ಇದರಿಂದ ಹೆಚ್ಚಿನ ಬೆಳೆಯನ್ನು ಬೆಳೆಯಲು ಸಾಧ್ಯ. ಒಟ್ಟಾರೆ ಮಣ್ಣು ಪರೀಕ್ಷೆ ಆಧಾರಿತ ಕೃಷಿ ಮಾಡಬೇಕೆಂದು ಹೇಳಿದ ಅವರು ಅತೀಯಾದ ರಾಸಾಯನಿಕ ಬಳಕೆಯಿಂದಾಗಿ ಬಾಗಲಕೋಟ ಜಿಲ್ಲೆಯ ಶೇ.8 ರಷ್ಟು ಭೂಮಿ ಕೃಷಿ ಮಾಡಲು ಯೋಗ್ಯವಲ್ಲವೆಂದು ಸಮೀಕ್ಷೆ ವರದಿಯಿಂದ ತಿಳಿದುಬಂದಿರುವುದುಕ್ಕೆ ಕಳವಳ ವ್ಯಕ್ತಪಡಿಸಿದರು. 

ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್‌.ಎಸ್‌.ಬಿರಾದಾರ ಅಧ್ಯಕ್ಷತೆವಹಿಸಿ ಮಾತನಾಡಿ ರೈತರು ಹಣದಾಸೆಗೆ ಅನಾವಶ್ಯಕ ರಸಗೊಬ್ಬರ ಬಳಸಿ ಬೆಳೆ ಬೆಳೆಯುತ್ತಾರೆ ಇದರಿಂದ ಭೂಮಿಯ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ಅಲ್ಲದೆ ಅತೀಯಾದ ರಾಸಾಯಣಿಕ ಗೊಬ್ಬರ ಬಳಸಿ ಬೆಳೆದ ಬೆಳೆಯನ್ನು ಸೇವಿಸುವದರಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತದೆ ಇದನ್ನು ರೈತರು ಗಮನದಲ್ಲಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ ಎಂದರು. 

ಐಕ್ಯೂಎಸಿ ಕ್ರೈಟೇರಿಯಾ 7ರ ಬೆಸ್ಟ್‌ ಪ್ರಾ-್ಯಕ್ಟಿಸ್‌ದ ಸಂಯೋಜಕ ಪ್ರೊ.ಎ.ಹೆಚ್‌.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಮಣ್ಣಿನ ಗುಣ ಮತ್ತು ಮಣ್ಣಿನ ಪೋಷಕಾಂಶಗಳ ಕುರಿತು ಮಾತನಾಡಿದ ಅವರು ಮಹಾವಿದ್ಯಾಲಯದ ವತಿಯಿಂದ ಕನಿಷ್ಠ 120 ಜನ ರೈತರ ಹೊಲದಲ್ಲಿನ ಮಣ್ಣುನ್ನು ಸಂಗ್ರಹಿಸಿ ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಿ ಮಣ್ಣಿನ ಪರೀಕ್ಷಾ ವರದಿಯನ್ನು ರೈತರಿಗೆ ಉಚಿತವಾಗಿ ವಿತರಿಸುವ ಕೆಲಸ ಮಾಡುತ್ತಿರುವದಾಗಿ ಹೇಳಿದರು. 

ಐಕ್ಯೂಎಸಿ ಕ್ರೈಟೇರಿಯಾ 7ರ ಅಧ್ಯಕ್ಷ ಡಾ.ಸುರೇಶ ಮೋದಿ ವೇದಿಕೆ ಮೇಲಿದ್ದರು, ಪ್ರೊ.ಪ್ರೀತಿ ಕರಡಿ ಪ್ರಾರ್ಥನೆ ಹಾಡಿದರು, ಪ್ರೊ,ವ್ಹಿ.ಎಸ್‌.ಮುನವಳ್ಳಿ ಸ್ವಾಗತಿಸಿದರು, ಪ್ರೊ.ಎಸ್‌.ಬಿ.ಶಿರಬಡಗಿ ನಿರೂಪಿಸಿದರು, ಪ್ರೊ.ಕೆ.ಕೆ.ಕಿತ್ತೂರ ವಂದಿಸಿದರು. 

ಐಕ್ಯೂಎಸಿ ಕ್ರೈಟೇರಿಯಾ 7ರ ಸದಸ್ಯರು, ಬೋಧಕರು ಮತ್ತು ರೈತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.