ಆರಿ್ಪಡಿ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಕಾರ್ಯಾಗಾರ
Soft skills workshop at Arpadi College
ಆರಿ್ಪಡಿ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಕಾರ್ಯಾಗಾರ
ಬೆಳಗಾವಿ 13: ಸಂವಹನ, ನಾಯಕತ್ವ, ಹೊಂದಿಕೊಳ್ಳುವಿಕೆ ಮೊದಲಾದ ಸಾಫ್ಟ್ ಸ್ಕಿಲ್ಸ್ಗಳು ವೃತ್ತಿ ಜೀವನ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಖಕಆಋಓ ಅಲ್ಯೂಮ್ನಸ್ ಹಾಗೂ ಕರ್ನಾಟಕ ಹೈಕೋರ್ಟ್ನಲ್ಲಿ ವಕಾಲತ್ತು ನಡೆಸುತ್ತಿರುವ ಕಿರಿಯ ವಕೀಲ ನ್ಯಾ. ಕೃಷ್ಣಕುಮಾರ ಜೋಶಿ ಹೇಳಿದರು.
ಅವರು ಆರಿ್ಪ.ಡಿ. ಕಾಲೇಜ್ ಆಫ್ ಆರ್ಟ್ಸ ಅಂಡ್ ಕಾಮರ್ಸ್ (ಸ್ವಾಯತ್ತ), ಬೆಳಗಾವಿ ಇವರ ಪ್ಲೇಸ್ಮೆಂಟ್ ಸೆಲ್ ಹಾಗೂ ಅಲ್ಯೂಮ್ನಿ ಅಸೋಸಿಯೇಷನ್ ಅವರ ಸಂಯುಕ್ತಾಶ್ರಯದಲ್ಲಿ, ಪ್ಲೇಸ್ಮೆಂಟ್ ಸೆಲ್ನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನೆಯ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ “ಖಠಣ ಖಞಟ ಣಚಿಣ ಒಚಿಣಣಜಡಿ: ಃಜಥಿಠಜ ಒಚಿಡಿ ಚಿಟಿಜ ಆಜರಡಿಜ” ಎಂಬ ವಿಷಯದ ಕುರಿತ ಕಾರ್ಯಾಗಾರಕ್ಕೆ ಮುಖ್ಯ ಅತಿಥಿ ಮತ್ತು ಕೀ-ನೋಟ್ ಸ್ಪೀಕರ್ ಆಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಕಾಡೆಮಿಕ್ ಸಾಧನೆ ಮಹತ್ವದ್ದಾದರೂ, ಇಂದಿನ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಸಂವಹನ, ಸಮಸ್ಯೆ ಪರಿಹಾರ ಹಾಗೂ ಜಾಲತಂತ್ರ ನಿರ್ಮಾಣವೇ ವ್ಯಕ್ತಿಯನ್ನು ವಿಭಿನ್ನಗೊಳಿಸುತ್ತದೆ ಎಂಬುದನ್ನು ಅವರು ಪ್ರಸ್ತಾಪಿಸಿದರು.
ಪ್ರಿನ್ಸಿಪಾಲ್ ಡಾ. ಅಭಯ ಎಮ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ಲೇಸ್ಮೆಂಟ್ ಸೆಲ್ ಆಫೀಸರ್ ಪ್ರೋ. ಪೂಜಾ ಡಿ. ಸ್ವಾಗತಿಸಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಭವಿಷ್ಯದ ದಾರೀದೀಪವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಋಂಅ ಹಾಗೂ ಅಲ್ಯೂಮ್ನಿ ಅಸೋಸಿಯೇಷನ್ ಸಂಯೋಜಕರು ಪ್ರಸನ್ನ ಬಿ. ಜೋಶಿ ಉಪಸ್ಥಿತರಿದ್ದರು. ಹೇಮಾ ಅನಗೋಳಕರ ತಾಂತ್ರಿಕ ನೆರವು ಒದಗಿಸಿದರು.
ಕಸಕ್ ಸುತಾರ, ಶೃತಿ ಬಿ. ಮತ್ತು ಪೂಜಾ ಮಡಿವಾಳ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ತಿನ ಸದಸ್ಯರು, ಬಿಎ ಬಿಸಿಒಎಂ ಬಿಬಿಎ ವಿದ್ಯಾರ್ಥಿಗಳು ಸಂವಾದಾತ್ಮಕ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಉದ್ಯೋಗಾರ್ಹತೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತಾವು ಎದುರಿಸಬೇಕಾದ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು. ವಂದನಾರೆ್ಣಯೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು.
ಕಾರ್ಯಾಗಾರವು ಸಮಗ್ರ ಶಿಕ್ಷಣವು ಶೈಕ್ಷಣಿಕತೆಯನ್ನು ಮೀರಿ, ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಗತ್ಯವಾದ ಜೀವನ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಎಂಬ ಸಂದೇಶವನನು ನೀಡಿತು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 