ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ: ಜಾತಿ ಕಾಲಂನಲ್ಲಿ ಸ್ವ ಜಾತಿ ಬರೆಸಿ: ವೇಣುಗೋಪಾಲ
Socio-Educational Economic Survey: Write your caste in the caste column: Venugopal
ಬಳ್ಳಾರಿ 22: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಜನಗಣತಿ ನಡೆಯಲಿದೆ. ಈ ವೇಳೆ ಕ್ಷೌರಿಕ ಸಮುದಾಯದ ಜನರು ಜಾತಿ ಕಾಲಂ ನಲ್ಲಿ ಸವಿತಾ ಎಂದು ನಮೋದಿಸುವಂತೆ ಎಐಸಿಸಿ ಸದಸ್ಯರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಂಸಿ.ವೇಣುಗೋಪಾಲ್ ಸಲಹೆ ನೀಡಿದರು.
ನಗರದಲ್ಲಿ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಜನಗಣತಿ ಸಮೀಕ್ಷೆ ಕುರಿತ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ತೋರಿಕೆ, ಆಡಂಬರಕ್ಕಾಗಿ ಮಾಹಿತಿಯನ್ನು ನೀಡಬಾರದು. ಇದರಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊರೆಯಬಹುದಾದ ಹೆಚ್ಚಿನ ಸೌಲಭ್ಯಗಳು ಕೈತಪ್ಪಬಹುದು ಎಂದು ಎಚ್ಚರಿಸಿದರು.
ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಶರಣಪ್ಪ ಮಾತನಾಡಿ ಸವಿತಾ ಸಮಾಜದ ಜಾತಿ ನಿಂದನೆ ಪದವನ್ನು ತೆಗೆದುಹಾಕಿಸಬೇಕು ಎಂದು ಮನವಿ ಮಾಡಿದರು. ಹೊಸಪೇಟೆ ನಗರಸಭಾ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಸವಿತಾ ಸಮಾಜದ ಎಲ್ಲಾ ಬಾಂಧವರು ಒಟ್ಟಾಗಿ ಜಾತಿ ಸಮೀಕ್ಷೆಯಲ್ಲಿ "ಸವಿತಾ" ಎಂದು ಬರೆಸಿ, ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿಣಿ ಸದಸ್ಯ ತಿಪ್ಪಣ್ಣ, ಹಿರಿಯ ಮುಖಂಡ ಶಿವಶಂಕರ್ ಬೆಂಗಳೂರು, ಹಾಗೂ ಆನಂದ್ ಸಿಂಗ್ ಕೌಲ್ ಬಜಾರ್, ಪ್ರಕಾಶ್, ಚಿನ್ನು ಜಿಲ್ಲಾಧ್ಯಕ್ಷರಾದ ರಾಕೇಶ್, ತಾಲೂಕು ಅಧ್ಯಕ್ಷ ಶೇಖಣ್ಣ, ಸೇರಿದಂತೆ ಸಮಾಜದ ನೂರಾರು ಮುಖಂಡರುಗಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 