ಸಮಾಜಿಕ ಕಾರ್ಯಕರ್ತ ಪ್ರಭು ಸಣ್ಣಕ್ಕಿಗೆ ಸನ್ಮಾನ
Social activist Prabhu Sannakki honored
ತಾಳಿಕೋಟೆ, 17 : ಪಟ್ಟಣದ ಶರಣಸಾಹಿತ್ಯ ಪರಿಷತ್ತು, ಯುವ ಘಟಕ, ಕದಳಿ ವೇದಿಕೆ ವತಿಯಿಂದ ಸ್ಥಳೀಯ ಅಗ್ನಿ ಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಪ್ರಭು ಸಣ್ಣಕ್ಕಿ ಅವರು ಹುಬ್ಬಳ್ಳಿಗೆ ವರ್ಗವಾದ ಹಿನ್ನೆಲೆಯಲ್ಲಿ ಶುಕ್ರವಾರ ಗೌರವಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಎಸ್.ಜಮ್ಮಲದಿನ್ನಿ, ಕುಮಾರೇಶ್ವರ ಹಿರಿಯಪ್ರಾಥಮಿಕ ಶಾಲೆಯ ಕಾಶಿನಾಥ ಸಜ್ಜನ, ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಗುಂಡುರಾವ್ ಧನಪಾಲ, ಜೆ.ಎಸ್.ಜಿ.ಪಿಯು ವಿಜ್ಞಾನ ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಮಾತನಾಡಿ, ವೃತ್ತಿಯಿಂದ ಅಗ್ನಿ ಶಾಮಕದಲ್ಲಿ ಕಾರ್ಯ ನಿರ್ವಹಿಸುತ್ತ ಗಾಯಕರಾಗಿ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಪ್ರಭು ಸಣ್ಣಕ್ಕಿ ಗುರುತಿಸಿಕೊಂಡಿದ್ದಾರೆ. ಸಹೃದಯಿ, ಸ್ನೇಹಮಯಿ, ಯಾಗಿದ್ದಾರೆ. ತಾಳಿಕೋಟೆಯಲ್ಲಿ ಬೆಳೆದ ಮರ ಹುಬ್ಬಳ್ಳಿಯಲ್ಲಿ ಕಂಪು ಸೂಸಲಿ ಎಂದರು. ಸಿದ್ದು ಕರಡಿ ನಿರ್ವಹಿಸಿದರು. ಪ್ರಭು ಸಣ್ಣಕ್ಕಿ ಪ್ರಾರ್ಥಿಸಿದರು.
ಶರಣು ಗಡೇದ ವಂದಿಸಿದರು. ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಜಗದೀಶ ಬಿಳೇಭಾವಿ, ಮಹದೇವಪ್ಪ ಕುಂಬಾರ ಇದ್ದರು. ಕಾರ್ಯಕ್ರಮದಲ್ಲಿ ಗಂಗಾಧರ ಕಸ್ತೂರಿ, ಶಿವಲಿಂಗಪ್ಪ ಪಾಲ್ಕಿ, ಈರಣ್ಣ ಕಲಬುರ್ಗಿ, ರಮೇಶ ಸಾಲಂಕಿ,, ಟಿ.ಸಿ.ಸಜ್ಜನ, ಎ.ಎಂ.ಮೂಲಿಮನಿ, ಅಶೋಕ ಚಿನಗುಡಿ, ಸಂತೋಷ, ಶ್ರೀನಿವಾಸ,ಶ.ಸಾ.ಪ. ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ಡಾ.ನಡುವಿನಕೇರಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 