ದೀಪೋತ್ಸವ ಮತ್ತು ಶಿವಾನುಭಗೋಷ್ಠಿ ಕಾರ್ಯಕ್ರಮ: ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ: ಡಾ. ಬಸವಾನಂದ ಸ್ವಾಮೀಜಿ
ಸುಣಧೋಳಿ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೀಪೋತ್ಸವ ಮತ್ತು ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀಗಳು
ಮೂಡಲಗಿ 20: ಸಮಾಜದ ಅಂಕುಡೊಂಕು ಸರಿಪಡಿಸಿ, ಜಾತಿ ಭೇದಗಳನ್ನು ಮಾಡದೆ. ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುತ್ತ ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ ಎಂದು ಬೆಳ್ಳೆರಿ ಶಿವಾನಂದ ಮಠದ ನಿಸರ್ಗ ಚಿಕಿತ್ಸಾ ತಜ್ಞ ಡಾ. ಬಸವಾನಂದ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಸುಣಧೋಳಿ ಗ್ರಾಮದಲ್ಲಿ ನಡೆಯುತ್ತಿರುವ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ದೀಪೋತ್ಸವ ಮತ್ತು ಶಿವಾನುಭಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಾಧೀಶರಾದವರು ಭಾಷಭಿಮಾನ, ದೇಶಭಿಮಾನ ಬೆಳೆಸಿಕೊಂಡು ಸಮಾಜ ಸುಧಾರಣೆಯ ಕಾರ್ಯ ಮಾಡಬೇಕು ಇತ್ತಿಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಸೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಬೇಸರದ ವಿಷಯವಾಗಿದೆ. ಪಾಶ್ಚಾತ್ಯ ಪರಂಪರೆ ಬಿಟ್ಟು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳುವುದರ ಜೊತೆ ಮಕ್ಕಳಿಗೂ ಕಲಿಸೋಣ. ಶರಣರ ಮಾತುಗಳನ್ನು ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಹಾಂಕಾರಕ್ಕೆ ವಿರಾಮ ನೀಡಿದಾಗ ಮನುಷ್ಯ ಆರಾಮವಾಗಿರುತ್ತಾನೆ ಎಂದರು.
ಶೇಗುಣಸಿ ವಿರಕ್ತಮಠದ ಮಹಾಂತ ದೇವರು ಆಶೀರ್ವಚನ ನೀಡುತ,್ತ ನಿಷ್ಕಲ್ಮಶ ಮನಸ್ಸಿನಲ್ಲಿ ಭಗವಂತ ನೆಲೆಸಿರುತ್ತಾನೆ. ಗುರುವಿನ ಗುಲಾಮರಾಗುವ ತನಕ ಮುಕ್ತಿ ಪ್ರಾಪ್ತಿಯಾಗುವುದಿಲ್ಲ. ಅದಕ್ಕಾಗಿ ನಾವು ಭಗವಂತನ ಸೇವೆ ಮಾಡಬೇಕು. ಮಹಾತ್ಮರ ಮಾತುಗಳನ್ನು ಆಲಿಸಿ ಅವುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೆ ನಿತ್ಯ ಬದುಕು ಸಾರ್ಥಕವಾಗುತ್ತದೆ. ಧರ್ಮದ ತಿರುಳು ತಿಳಿಯದೇ ಇದ್ದರೆ ಮನುಷ್ಯ ಜನ್ಮವೇ ವ್ಯರ್ಥ. ಜಗತ್ತಿನಲ್ಲಿ ದೇವರು ದೊಡ್ಡವನಲ್ಲ, ದೇವರನ್ನು ತೋರಿಸುವ ಗುರುದೇವಾ ದೊಡ್ಡವನು. ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಐಶ್ವರ್ಯ-ಕೀತರ್ಿ ಪ್ರಾಪ್ತಿಯಾಗುವುದು ಎಂದು ಹೇಳಿದರು.
ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ದೇವರು ಮಾತಾನಾಡಿ, ಶರೀರಕ್ಕೆ ಸಂಸ್ಕಾರ ಅನ್ನುವುದು ಮೊದಲು ನೀಡಬೇಕು. ನಮ್ಮ ಜೀವನ ಪಾವನವಾಗಲು ಗುರುವಿನ ಅನುಗ್ರಹಬೇಕು ಎಂದರು.
ಹೊಸ ಯರಗುದ್ರಿ ಈರಲಿಂಗೇಶ್ವರ ಮಠದ ಸಿದ್ದಪ್ರಭು ಶಿವಾಚಾರ್ಯ ಸ್ವಾಮಿಜೀ ಮಾತನಾಡಿ, ನಾವೇಲ್ಲರು ವಿಶೇಷ ಪವಾಡ ನೋಡಬೇಕಾದರೆ ಸುಣಧೋಳಿಯ ಜಡಿಸಿದ್ದೇಶ್ವರ ಮಠದಲ್ಲಿ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಲ್ಲದ ಬಾಗೇವಾಡಿಯ ಮಾಹಾಂತೇಶ್ವರ ವಿರಕ್ತಮಠದ ಶಿವಾನಂದ ಮಹಾಸ್ವಾಮಿ ಆಶೀರ್ವಚನ ನೀಡಿ, ಹಿಂದಿನ ಕಾಲದಲ್ಲಿ ಹೆಣ್ಣನ್ನು ತಿರಸ್ಕಾರ ಭಾವದಿಂದ ಕಾಣುತ್ತಿದ್ದರು. ಆದರೆ ಈಗ ಮಹಿಳೆ ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಿವುದರಿಂದ ಪುರುಷನಿಗೆ ಸರಿಸಮಾನಳಾಗಿದ್ದಾಳೆ. ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸುವರೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಹೇಳಿದರು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜೀ, ಧಾರವಾಡದ ಶರಣರಾದ ಬಿ.ಜಿ.ಪಾಟೀಲ ವೇದಿಕೆಯಲ್ಲಿದ್ದರು.
ಸಿ.ಎಸ್.ವಾಲಿ, ಲಕ್ಷ್ಮಣ ಸೋಮುಗೌಡ, ಶಿವಪ್ಪಾ ಜಿಡ್ಡಿಮನಿ, ಭೀರಪ್ಪ ಮಹಾಲಿಂಗಪೂರ, ಸಿದ್ದಪ್ಪ ಗಾಣಿಗೇರ, ಶಂಕರ ದೇವನಂದ, ಮಹಾಲಿಂಗಪ್ಪ ಢವಳೇಶ್ವರ, ಭೀಮನಗೌಡ ಪಾಟೀಲ ಉಪಸ್ಥಿತರಿದ್ದರು.
ಎಂ.ಎಸ್. ಅಂದಾನಿ ನಿರೂಪಿಸಿದರು. ಮುತ್ತು ಜಿಡ್ಡಿಮನಿ ಸ್ವಾಗತಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 