ಸಾರ್ವಜನಿಕ ಸೇವೆಯಲ್ಲಿ ಸರಳತೆ ಆದರ್ಶ: ಕೃಷ್ಣ ಎಚ್‌. ಹಡಪದ

ಸಾರ್ವಜನಿಕ ಸೇವೆಯಲ್ಲಿ ಸರಳತೆ ಆದರ್ಶ: ಕೃಷ್ಣ ಎಚ್‌. ಹಡಪದ  Simplicity is the ideal in public service: Krishna H. Hadapada

ಗದಗ 28: ಅಧಿಕಾರ ಹಾಗೂ ಕುಟುಂಬದ ಪ್ರಭಾವವು ಸಾರ್ವಜನಿಕ ಸೇವೆಯ ಸಾಧನವಾಗಬೇಕು ಹೊರತು ಅಹಂಕಾರದ ಪ್ರದರ್ಶನವಾಗಬಾರದು. ಸರಳತೆ, ಜನಪರತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜದ ವಿಶ್ವಾಸ ಗಳಿಸಿದ ನಾಯಕರು ಇಂದಿನ ಯುವಜನತೆಗೆ ಆದರ್ಶವಾಗಿದ್ದಾರೆ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಚ್‌. ಹಡಪದ ಅಭಿಪ್ರಾಯಪಟ್ಟಿದ್ದಾರೆ.  

ಪತ್ರಿಕಾ ಪ್ರಕಟಣೆಯಲ್ಲಿ ಅವರು, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಅವರ ಸಾರ್ವಜನಿಕ ಬದುಕಿನ ಸರಳತೆ ಮತ್ತು ಜನಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ.  

ಪವನ್ ಕಲ್ಯಾಣ್ ಅವರು ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದರೂ, ಅದರ ಪ್ರಭಾವವನ್ನು ಅವಲಂಬಿಸದೆ ಜನಸಾಮಾನ್ಯರ ಪರವಾಗಿ ‘ಜನಸೇನಾ’ ಪಕ್ಷವನ್ನು ಕಟ್ಟುವ ಮೂಲಕ ತಮ್ಮದೇ ಆದ ರಾಜಕೀಯ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಬಡವರು, ಕಾರ್ಮಿಕರು ಮತ್ತು ಶೋಷಿತರ ಪರವಾಗಿ ನಿರಂತರವಾಗಿ ಧ್ವನಿಯಾಗಿರುವುದು ಅವರ ಜನಪರ ನಾಯಕತ್ವದ ಪ್ರತೀಕವಾಗಿದೆ ಎಂದು ಅವರು ಹೇಳಿದ್ದಾರೆ.  

ಅದೇ ರೀತಿಯಲ್ಲಿ, ಕರ್ನಾಟಕದ ಸಹಕಾರ ಕ್ಷೇತ್ರದ ಹಿರಿಯ ನಾಯಕರ ಕುಟುಂಬದ ಹಿನ್ನೆಲೆ ಹೊಂದಿರುವ ಕೃಷ್ಣಗೌಡ ಪಾಟೀಲ ಅವರು ಕೂಡ ಕುಟುಂಬದ ಪ್ರಭಾವವನ್ನು ದುರುಪಯೋಗಪಡಿಸಿಕೊಳ್ಳದೆ, ಸರಳತೆ ಮತ್ತು ಸೇವಾ ಮನೋಭಾವದೊಂದಿಗೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಡಪದ ಅಭಿಪ್ರಾಯಪಟ್ಟಿದ್ದಾರೆ.  

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ರೈತರು, ಕಾರ್ಮಿಕರು, ಯುವಕರು ಹಾಗೂ ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಸರಳ ನಡೆ, ಸ್ನೇಹಪರ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವದಿಂದ ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.  

ಯುವ ವಯಸ್ಸಿನಲ್ಲಿಯೇ ಜನಸಾಮಾನ್ಯರ ಅಭಿಮಾನ ಗಳಿಸಿರುವ ಕೃಷ್ಣಗೌಡ ಪಾಟೀಲ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿಯುತ ನಾಯಕತ್ವ ವಹಿಸಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಕೃಷ್ಣ ಎಚ್‌. ಹಡಪದ ಆಶಯ ವ್ಯಕ್ತಪಡಿಸಿದ್ದಾರೆ.