ಬರಗಾಲದ ನೆರಳಲ್ಲಿ ಸಂಬರಗಿಯಲ್ಲಿ ಸರಳ ಗಣೇಶೋತ್ಸವ

ಬರಗಾಲದ ನೆರಳಲ್ಲಿ ಸಂಬರಗಿಯಲ್ಲಿ ಸರಳ ಗಣೇಶೋತ್ಸವ  Simple Ganeshotsav in Sambaragi under the shadow of drought


ಸಂಬರಗಿ 15: ಗಡಿ ಪ್ರದೇಶದಲ್ಲಿ ಬರಗಾಲದ ಪರಿಣಾಮ ರೈತರು ಸಂಕಷ್ಟ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಸಂಬರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ವಿವಿಧ ಮಂಡಳಿಗಳು ನಿರ್ಧರಿಸಿವೆ. ಮಳೆಯ ಕೊರತೆಯಿಂದ ಜನರು ಹಾಗೂ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣೇಶೋತ್ಸವದ ಸಡಗರ ಕಡಿಮೆಯಾಗಿದ್ದು, ಗಣೇಶ ಮೂರ್ತಿಗಳ ಗಾತ್ರ ಹಾಗೂ ಪ್ರತಿಷ್ಠಾಪನೆಗಳ ಸಂಖ್ಯೆಯೂ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 200ರಿಂದ 2,000ದವರೆಗೆ ಸಣ್ಣ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಬರಗಿ, ಶಿರೂರ, ಅನಂತಪುರ, ಮಲಾಬಾದ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲ ಮಂಡಳಿಗಳು ಮೊದಲ ದಿನವೇ ಮಹಾಪ್ರಸಾದ ಆಯೋಜಿಸಿವೆ. ಹಲವು ಗ್ರಾಮಗಳಲ್ಲಿ ಏಳನೇ ದಿನ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬರಗಾಲದ ಪರಿಸ್ಥಿತಿಯಿಂದಾಗಿ ಈ ಬಾರಿ ಸಂಬರಗಿ ಗ್ರಾಮದಲ್ಲಿಯೂ ಗಣೇಶೋತ್ಸವ ಸರಳವಾಗಿ ನಡೆಯುತ್ತಿದೆ.