ನಾಳೆ ಭೋವಿ ವಡ್ಡರ ಕಾಲೋನಿಗೆ ಸಿದ್ಧಲಿಂಗ ಶ್ರೀ ಭೇಟಿ

ನಾಳೆ ಭೋವಿ ವಡ್ಡರ ಕಾಲೋನಿಗೆ ಸಿದ್ಧಲಿಂಗ ಶ್ರೀ ಭೇಟಿ  Siddhalinga Shree to visit Bhovi Vaddara Colony tomorrow


ತಾಳಿಕೋಟಿ 19 : ಐತಿಹಾಸಿಕ   ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲಶಿವಯೋಗಿ  ಸಿದ್ಧಲಿಂಗ ಮಹಾಸ್ವಾಮಿಗಳು ಆ.21ರಂದು ಬೆಳಿಗ್ಗೆ 9 ಗಂಟೆಗೆ ಸ್ಥಳೀಯ ಸಿದ್ಧರಾಮೇಶ್ವರ ಭೋವಿ ಕಾಲೋನಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೋನಿಯಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಸನ್ನಿಧಿ ಆಶೀರ್ವಚನ ಆಯೋಜಿಸಲಾಗಿದೆ. ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆಯುವಂತೆ ಭೋವಿ ವಡ್ಡರ ಸಮಾಜದ ಗೌರವಾಧ್ಯಕ್ಷ ದೇವು ಕೂಚಬಾಳ ಹಾಗೂ ಅಧ್ಯಕ್ಷ ಶ್ರೀನಿವಾಸ್ ಕುಲಕರ್ಣಿ ಮನವಿ ಮಾಡಿದ್ದಾರೆ.