ಚಿಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ಜಾತ್ರಾ ಮಹೋತ್ಸವ

ಚಿಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ಜಾತ್ರಾ ಮಹೋತ್ಸವ  Shravana Month Fair Festival at Chipavana Kshetra Badekolla Matha

ಲೋಕದರ್ಶನ ವರದಿ 

ಬೆಳಗಾವಿ 05 : ತಾಲೂಕಿನ ಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ದಿ. 09 ಮತ್ತು 10 ರಂದು  ನಾಗೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಜರುಗಲಿದೆ.  ಬುಧವಾರ ದಿ. 09 ರಂದು ಮಾಸ್ತಮರಡಿ ಹಾಗೂ ತಾರಿಹಾಳ ಗ್ರಾಮಗಳಿಂದ ಪಾಲಕಿ ಬರಮಾಡಿಕೊಳ್ಳುವುದು. ನಂತರ ಭಜನೆ, ಜಾಗರಣೆ ಹಾಗೂ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗವವು. ಗುರುವಾರ ದಿ. 10 ರಂದು ಮುಂಜಾನೆ 9 ಗಂಟೆಗೆ ಶ್ರೀ ನಾಗೇಂದ್ರ ಮಹಾಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭೀಷೇಕ, 11 ಗಂಟೆಗೆ ಅಜ್ಜನವರ ಪಾದಪೂಜೆ, 11.30ಕ್ಕೆ ಪಾಲಕಿ ಉತ್ಸವ 12.30ಕ್ಕೆ ರಥೋತ್ಸವ ಮಧ್ಯಾಹ್ನ 2 ಗಂಟೆಗೆ ಮಹಾಪ್ರಸಾದ ಸಂಜೆ 4 ಗಂಟೆಗೆ ಪಾಲಕಿ ಬಿಳ್ಕೊಡುವದರೊಂದಿಗೆ ಜಾತ್ರೆ ಸಂಪನ್ನಗೊಳ್ಳುವುದೆಂದು ಪಾವನ ಕ್ಷೇತ್ರ ಬಡೇಕೊಳ್ಳಮಠದ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.