ಬಸವಲಿಂಗೇಶ್ವರ ಅಕ್ಕನ ಬಳಗ ವತಿಯಿಂದ ಶಿವಾನುಭವ ಗೋಷ್ಠಿ ಕಾರ್ಯಕ್ರಮ
ಯಲಬುರ್ಗಾ 04: “ ಮಾನವನ ಜೀವನ ಆರಂಭ ಮತ್ತು ಅಂತ್ಯ ಕಾಣುವುದರೊಳಗೆ ಸಮಾಜಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡಿದಾಗ ಮನುಷ್ಯನ ಜೀವನ ಸಾರ್ಥಕ ” ಎಂದು ಶ್ರೀ ಷ ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಬುಧವಾರ ಸಂಜೆ ಶ್ರೀ ಬಸವಲಿಂಗೇಶ್ವರ ಅಕ್ಕನ ಬಳಗ ವತಿಯಿಂದ ನಡೆದ ಎರಡನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮರಸ್ಯದಿಂದ ಜೀವಿಸಬೇಕು ಎಂದರು.
ನಂತರ ಗದಗಿನ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಜ್ಯೋತ್ಸಾ ಅಕ್ಕನವರು ಮಾತನಾಡಿ, ಆತ್ಮ ಮತ್ತು ಪರಮಾತ್ಮ ಹಿಂದೂ ಧರ್ಮದಲ್ಲಿ ಪ್ರಮುಖ ಪರಿಕಲ್ಪನೆಗಳಾಗಿವೆ. ಆತ್ಮವು ವೈಯಕ್ತಿಕ ಆತ್ಮವನ್ನು ಸೂಚಿಸುತ್ತದೆ, ಆದರೆ ಪರಮಾತ್ಮವು ಸಾರ್ವತ್ರಿಕ ಸ್ವಯಂ ಅಥವಾ ಎಲ್ಲದರ ಮೂಲವಾಗಿರುವ ದೈವಿಕ ಶಕ್ತಿಯಾಗಿದೆ. ಇವೆರಡೂ ಒಂದೇ ತತ್ವದ ಎರಡು ಅಭಿವ್ಯಕ್ತಿಗಳಾಗಿವೆ ಎಂದರು. ವಿಶೇಷವಾಗಿ ಗಮನ ಸೆಳೆದ ಸಂಗೀತ ಕಾರ್ಯಕ್ರಮ ಮಂಗಳೇಶ ಶ್ಯಾಗೋಟಿ ಹಾಗೂ ಶರಣಕುಮಾರ ಬಂಡಿ ಅವರಿಂದ ಉತ್ತಮ ಕಾರ್ಯಕ್ರಮ ನೀಡಿದರು.
ಈ ವೇಳೆ ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಮುರಡಿಮಠ, ಶ್ರೀದೇವಿ ಭೀಮನಗೌಡ್ರ, ಸುನೀತಾ ಪತಂಗರಾಯ, ಸವೀತಾ ಓಜನಹಳ್ಳಿ, ಚೆನ್ನಮ್ಮ ಆರ್ ಪಾಟೀಲ್, ಗೀತಾ ಕೊತ್ತಲ, ಶಾರದಾ ಕೊಣ್ಣೂರ, ನೀಲಮ್ಮ ಹುಬ್ಬಳ್ಳಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಕುಂತಲಮ್ಮ ಮಾಲಿಪಾಟೀಲ್, ಸೇರಿ ಮತ್ತಿತರ ರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 