ಮೇ 16ರಂದು ಶನೀಶ್ವರ ಜಯಂತಿ

ಮೇ 16ರಂದು ಶನೀಶ್ವರ ಜಯಂತಿ Shaniwar Jayanti on May 16th


ಬೆಳಗಾವಿ 11: ಶನೀಶ್ವರ ಜಯಂತಿ ಜನ್ಮ ಉತ್ಸವವನ್ನು ಶನಿವಾರ ಮೇ 16ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ವೈಶಾಖ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತಿದ್ದು, ಇದನ್ನು ಶನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ವರ್ಷ, 13 ವರ್ಷಗಳ ನಂತರ ಅಪರೂಪದ ಶುಭ ಯೋಗವು ಒಟ್ಟಿಗೆ ಬರುತ್ತಿದೆ.  

ವಿಶೇಷ: ಶನಿ ಜಯಂತಿ ಶನಿವಾರ ಬರುವುದರಿಂದ ಈ ದಿನದ ಮಹತ್ವ ಹೆಚ್ಚಾಗಿದೆ. ಬೆಳಗಾವಿಯ ಶನಿ ಮಂದಿರ ಪಾಟೀಲ್ ಗಲ್ಲಿಯಲ್ಲಿ ಜನ್ಮೋತ್ಸವ, ತೈಲಾಭಿಷೇಕ, ಶನಿ ಶಾಂತಿ, ಪ್ರಸಾದ, ಅನ್ನದಾನ ಮತ್ತು ವಿವಿಧ ಸೇವೆಗಳನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು., ಮಾಹಿತಿಗಾಗಿ 9844361012 ಈ ನಂಬರಿಗೆ ಸಂಪರ್ಕಿಸಬೇಕೆಂದು ಪೂಜಾರಿ ಆನಂದ್ ಅಧ್ಯಾಪಕ್ ಅವರು ತಿಳಿಸಿದ್ದಾರೆ.