ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿನ
ನವದೆಹಲಿ, ಮೇ 17,ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಆಫ್ರಿದಿ ಇದೀಗ ಮತ್ತೊಮ್ಮೆ ಕಾಶ್ಮೀರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಇತ್ತೀಚೆಗೆ ಕೊರೊನಾ ವೈರಸ್ ಕಷ್ಟದ ಸಮಯದಲ್ಲಿ ಬಡಬಗ್ಗರಿಗೆ ದವಸಧಾನ್ಯ ಮತ್ತು ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿ ಸಮಾಜಿಕ ಕಳಕಳಿ ಮೆರದಿದ್ದ ಅಫ್ರಿದಿ, ತಮ್ಮ ಫೌಂಡೇಷನ್‌ಗೆ ನೆರವಾಗುವಂತೆ ಭಾರತದ ಸ್ಟಾರ್ ಕ್ರಿಕೆಟರ್ಸ್ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರ ಬಳಿ ಅಂಗಲಾಚಿದ್ದರು. ಇದಕ್ಕೆ ಭಾರತೀಯ ಕ್ರಿಕೆಟರ್ಸ್ ಸಹಕರಿಸಿದ್ದು ಭಾರಿ ವಿವಾದ ಎಬ್ಬಿಸಿತ್ತು.
ಅಷ್ಟೇ ಅಲ್ಲದೆ ಅಫ್ರಿದೆಗೆ ನೆರವಾದ ಕಾರಣಕ್ಕೆ ಹರ್ಭಜನ್ ಮತ್ತು ಯುವರಾಜ್ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಜಾಡಿಸಿದ್ದರು. ಇದೀಗ ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ (ಕಾನೂನು ಬಾಹೀರವಾಗಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗ) ಭೇಟಿ ನೀಡಿರುವ ಅಫ್ರಿದಿ ಭಾರತದ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಈ ವಿಡಿಯೋಗೆ ಭಾರತೀಯ ಅಭಿಮಾನಿಗಳು ಯುವಿ ಮತ್ತು ಹರ್ಭಜನ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಮಾನವೀಯತೆ ಎಂಬ ಮುಖವಾಡ ತೊಟ್ಟು ನಟಿಸುವಂತಹ ಈ ರೀತಿಯ ವ್ಯಕ್ತಿಗಳ ಬೆಂಬಲಕ್ಕೆ ಈಗಲೂ ನಿಲ್ಲುತ್ತೀರಾ? ಎಂದೆಲ್ಲಾ ಪ್ರಶ್ನಿಸಿದ್ದಾರೆ."ಇದೊಂದು ಸುಂದರ ಗ್ರಾಮ. ಇಲ್ಲಿಗೆ ಭೇಟಿ ನೀಡುವ ಬಯಕೆ ನನಗೆ ಬಹಳ ದಿನಗಳಿಂದ ಇತ್ತು. ಈಗ ಇಲ್ಲಿಗ ಬಂದು ಬಹಳ ಸಂತಸವಾಗಿದೆ. ಆದರೆ ವಿಶ್ವದಲ್ಲಿ ಇಂದು ಕೊರೊನಾ ವೈರಸ್ ಎಂಬ ಮಹಾಮಾರಿ ಹಬ್ಬಿರುವ ಕಾರಣ ನನ್ನ ಭೇಟಿ ತಡವಾಯಿತು. ಆದರೆ, ಇದಕ್ಕಿಂತಲೂ ದೊಡ್ಡ ರೋಗ ಮೋದಿ ಅವರ ಆಲೋಚನೆಯಾಗಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ರೋಗ ಅವರಿಗೆ ಅಂಟಿದೆ," ಎಂದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 