ಕಂಪ್ಲಿಯಿಂದ ತೆರಳಿದ ಏಳನೇ ದಿನದ ಪಾದಯಾತ್ರೆ : ಕಾಂಗ್ರೆಸ್ ವಿರುದ್ಧ ಮೊಳಗಿದ ಘೋಷಣೆಗಳು
Seventh day of the padayatra from Kampli: Slogans raised against the Congress
ಲೋಕದರ್ಶನ ವರದಿ
ಕಂಪ್ಲಿ 07: ಕಾಂಗ್ರೆಸ್ ದುರಾಡಳಿತ ಮತ್ತು ವೈಫಲ್ಯ ವಿರುದ್ಧದ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸೋಮವಾರ 7ದಿನ ದಿನದ ಪಾದಯಾತ್ರೆಗೆ ಸಾಕ್ಷಿಯಾಯಿತು. ಇಲ್ಲಿನ ವೃತ್ತದಿಂದ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾಲ್ನಡಿಗೆ ಪಾದಯಾತ್ರೆ ಆರಂಭಗೊಂಡು, ಮೆಟ್ರಿ ಕಡೆಗೆ ಜನಸಾಗರದ ನಡುವೆ ಸಾಗಿತು.
ಬಿಜೆಪಿ ನಾಯಕರ ಜೊತೆಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿ, ಅವರ ಜೊತೆಗೆ ಹೆಜ್ಜೆ ಹಾಕುವ ಮೂಲಕ ಸಾಗಿಸದರು. ಗ್ರೆಸ್ ಸರ್ಕಾರದ ವಿರುದ್ಧ ಘೋಷ ವಾಕ್ಯಗಳೊಂದಿಗೆ ವಿವಿಧ ಕಲಾ ತಂಡಗಳ ಸಮ್ಮುಖದಲ್ಲಿ ಪಾದಯಾತ್ರೆ ನಡೆಯತು. ಪಟ್ಟಣದ ಸಕ್ಕರೆ ಕಾರ್ಖಾನೆ, ಎಲ್‌ಎಲ್‌ಸಿ ಕಾಲುವೆ, ದೇವಸಮುದ್ರ ಕ್ರಾಸ್, ಮೆಟ್ರಿವರೆಗೆ ತೆರಳಿ, ನಂತರ ಮಧ್ಯಾಹ್ನದ ಊಟಕ್ಕೆ ವಿಶ್ರಾಂತಿ ನೀಡಲಾಗಿತ್ತು.
ಮೆರವಣಿಗೆಯುದ್ಧಕ್ಕೂ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಜಮಾಹಿಸಿದರು. ಪ್ರಮುಖ ರಸ್ತೆಗಳಲ್ಲಿಬರುವ ಹಳ್ಳಿಗಳ ಕಾರ್ಯಕರ್ತರು ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮುಂದಿನ ಹಂತದ ಪಾದಯಾತ್ರೆಗೆ ಅನುವು ಮಾಡಿಕೊಟ್ಟರು.
ಎಲ್ಲೆಂದಲ್ಲಿ ಬಿಜೆಪಿ ಧ್ವಜಗಳು ರಾರಾಜಿಸಿದವು. ಪ್ರತಿ ಹಂತದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ರಣ ಕಹಳೆ ಮೊಳಗಿದವು. ಇಲ್ಲಿನ ಸಮೀಪದ ಹಳೇ ದರೋಜಿ ಬಳಿಯ ಕೆರೆಯ ಕೋಡಿ ವೀರಭದ್ರೇಶ್ವರ ದೇವಸ್ಥಾನ ಬಳಿ ವಾಸ್ತವ್ಯ ಹೂಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮುಖಂಡರಾದ ರಾಜುಗೌಡ, ಅಳ್ಳಳ್ಳಿ ವಿರೇಶ, ಸಿ.ಡಿ.ಮಹಾದೇವ, ಕಡೆಮನೆ ಪಂಪಾಪತಿ, ಬಿ.ವಿರೇಶ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 