ಅನ್ನದಾನೀಶ್ವರ ಮಠದ ಸೇವಾ ಕಾರ್ಯ ಶ್ಲಾಘನೀಯ: ಅಲ್ಲಾವುದ್ದೀನ್ ಯಮ್ಮಿ
Service activities of Annadanishwara Matha are praiseworthy: Allauddin Yammi
ಕುಕನೂರು, ಆ. 22: ಶ್ರದ್ಧೆ, ಕಾಯಿಕ ನಿಷ್ಠೆ, ಭಕ್ತರ ಮೇಲಿನ ಮಾತೃಪ್ರೇತಿ ಹಾಗೂ ಜೀವಕಾರುಣ್ಯದೊಂದಿಗೆ ಮಠವು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಮಾನವ ಧರ್ಮವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಅಲ್ಲಾವುದ್ದೀನ್ ಯಮ್ಮಿ ಹೇಳಿದರು.
ಕುಕನೂರು ಪಟ್ಟಣದ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಚಿಕ್ಕೇನಕೊಪ್ಪದ ಘನಮೌನಿ ತಪಸ್ವಿ ಶ್ರೀ ಚನ್ನವೀರ ಶರಣರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತಿ ಭೇದದ ವಿರುದ್ಧ ಧ್ವನಿ ಎತ್ತಿ ಸಮಾನತೆಯ ಸಂದೇಶ ಸಾರಿದ ಶರಣರ ಆಶಯದಂತೆ ಶ್ರೀಮಠದಲ್ಲಿಯೂ ಪೂಜ್ಯರು ಜಾತಿ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿರುವುದು ಇತರ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದರು.
ಶತಮಾನಗಳ ಮಠ ಪರಂಪರೆಯನ್ನು ಮುಂದುವರಿಸಿಕೊಂಡು ಶ್ರೀ ಅನ್ನದಾನೀಶ್ವರ ಮಠವು ಮುನ್ನಡೆಯುತ್ತಿದ್ದು, ಅದನ್ನು ಮುನ್ನಡೆಸುತ್ತಿರುವ ಪೂಜ್ಯ ಶ್ರೀ ಮಹಾದೇವ ಸ್ವಾಮೀಜಿಯವರು ಅಭಿನಂದನಾರ್ಹರು. ಮೌಢ್ಯ ಹಾಗೂ ಕಂದಾಚಾರಗಳಿಗೆ ಆಸ್ಪದ ನೀಡದೆ ವಾಸ್ತವಿಕ ಬದುಕಿಗೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಠಕ್ಕೆ ಆಗಮಿಸುವ ಭಕ್ತರಿಗೆ ಶಿವಶರಣರ ತತ್ವಾದರ್ಶದಂತೆ ಕಾಯಿಕ ನಿಷ್ಠೆಯ ಜೀವನಕ್ಕೆ ದಾರಿ ತೋರಿಸಲಾಗುತ್ತಿದೆ. ಮಠದ ಗಾರೆ ಕೆಲಸ ಸೇರಿದಂತೆ ಹಲವು ಕಾರ್ಯಗಳನ್ನು ಸ್ವತಃ ಕೈಗೆತ್ತಿಕೊಂಡು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹಸಿದವರಿಗೆ ಅನ್ನ ನೀಡುವುದರ ಜೊತೆಗೆ ಸಂಕಷ್ಟದಲ್ಲಿರುವವರಿಗೆ ಮಠದಿಂದ ನೆರವು ನೀಡಲಾಗುತ್ತಿದೆ. ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಸಂಕಲ್ಪದೊಂದಿಗೆ ಅರ್ಹ ಫಲಾನುಭವಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನ ನೀಡುವ ಕಾರ್ಯದಲ್ಲಿಯೂ ಮಠ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪೂಜ್ಯ ಮಹಾದೇವ ಸ್ವಾಮೀಜಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರ ನೋವು-ನಲಿವುಗಳಿಗೆ ಸರ್ಕಾರದ ಸಹಾಯ-ಸಹಕಾರ ಅಗತ್ಯವಾಗಿದೆ. ಪತ್ರಕರ್ತರು ದೇಶದ ಅಭಿವೃದ್ಧಿ ಹಾಗೂ ಸ್ವಾತಂತ್ರ್ಯದ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಸುಳ್ಳು ಸುದ್ದಿಗಳ ನಡುವೆ ನೈಜತೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಭವನದ ಕಟ್ಟಡ ನಿರ್ಮಾಣಕ್ಕೆ ಶ್ರೀ ಅನ್ನದಾನೀಶ್ವರ ಮಠದಿಂದ ?21 ಸಾವಿರ ದೇಣಿಗೆ ನೀಡುವುದಾಗಿ ಪೂಜ್ಯರು ಘೋಷಿಸಿದರು. ಪುರಾಣ ಕಾರ್ಯಕ್ರಮದ ಒಂದು ದಿನದ ದಾಸೋಹವನ್ನು ಕುಕನೂರು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಪೂಜ್ಯ ಶಿವಯೋಗೀಶ್ವರ ಸ್ವಾಮೀಜಿ, ನಾಗಭೂಷಣ ದೇಶಿಕರು, ಕಂಪ್ಪಸಾಗರದ ಸಂಗಮೇಶ ಕಲ್ಮಠ, ಜಾತ್ರಾ ಸಮಿತಿ ಅಧ್ಯಕ್ಷ ಶರಣಪ್ಪ ಚಂಡೂರು, ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಯತ್ನಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಖಾದರ್ ಸಾಬ್ ಸಿದ್ದೇಕೊಪ್ಪ, ವೀರಯ್ಯ ಹಿರೇಮಠ ಗೋಳರಕೊಪ್ಪ ಹಾಗೂ ಶರಣಪ್ಪ ಕುಕನೂರು ಸಂಗೀತ ಸೇವೆ ಸಲ್ಲಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 