ತಾವರಗೇರಾದ ಹಿರಿಯ ನಿವಾಸಿ ಮೊಹಮ್ಮದ್ ಹಾಫೀಜ್ ಜಾಗೀರ್ದಾರ್ ನಿಧನ

ತಾವರಗೇರಾದ ಹಿರಿಯ ನಿವಾಸಿ ಮೊಹಮ್ಮದ್ ಹಾಫೀಜ್ ಜಾಗೀರ್ದಾರ್ ನಿಧನ  Senior resident of Tavargera, Mohammad Hafeez Jagirdar, passes away


ಕೊಪ್ಪಳ, ಆಗಸ್ಟ್‌ 22: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಖತೀಬ್ ಹಾಗೂ ಜಾಗೀರ್ದಾರ್ ಮನೆತನದ ಹಿರಿಯ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದ ಮೊಹಮ್ಮದ್ ಹಾಫೀಜ್ ಜಾಗೀರ್ದಾರ್ (80) ಅವರು ಶುಕ್ರವಾರ ಮಧ್ಯರಾತ್ರಿ ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  

ಮೃತರ ಹಿರಿಯ ಪುತ್ರ ಇಫಾನ್ ಅಹ್ಮದ್ ಜಾಗೀರ್ದಾರ್ ಅವರು ಮೈಸೂರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಿರಿಯ ಪುತ್ರ ಇಮ್ರಾನ್ ಅಹ್ಮದ್ ಜಾಗೀರ್ದಾರ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಮೃತರ ಸಹೋದರ ಬಶೀರ್ ಜಾಗೀರ್ದಾರ್ ಅವರ ಪುತ್ರ ಮುಜೀಬ್ ಜಾಗೀರ್ದಾರ್ ಗಂಗಾವತಿಯಲ್ಲಿ ಎವರೆಸ್ಟ್‌ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಮತ್ತೊಬ್ಬ ಸಹೋದರ ಡಾ. ಜಹೀರ್ ಜಾಗೀರ್ದಾರ್ ಅವರು ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

ಮೃತರು ಕೊಪ್ಪಳದ ಹಿರಿಯ ಪತ್ರಕರ್ತ ಸಾದಿಕ್ ಅಲಿ ಹಾಗೂ ಮೈಸೂರಿನ ಉದ್ಯಮಿ ತಾಹಿರ್ ಅಲಿ ಅವರ ಹಿರಿಯ ಅಕ್ಕನ ಪತಿಯಾಗಿದ್ದರು. ಅಲ್ಲದೆ, ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಅಮ್ಜದ್ ಪಟೇಲ್ ಅವರ ನಿಕಟ ಸಂಬಂಧಿಯಾಗಿದ್ದರು.  

ಅಂತ್ಯಕ್ರಿಯೆ ಇಂದು  

ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತಾವರಗೇರಾ ಪಟ್ಟಣದ ಮುಸ್ಲಿಂ ಖಬರ್ಸ್ಥಾನದಲ್ಲಿ ಇಸ್ಲಾಂ ಧರ್ಮದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಜಾಗೀರ್ದಾರ್ ಕುಟುಂಬದವರು ತಿಳಿಸಿದ್ದಾರೆ.  

ಮೊಹಮ್ಮದ್ ಹಾಫೀಜ್ ಜಾಗೀರ್ದಾರ್ ಅವರ ನಿಧನಕ್ಕೆ ಸಮಾಜದ ವಿವಿಧ ಸಂಘಟನೆಗಳು, ಗಣ್ಯರು ಹಾಗೂ ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಅಲ್ಲಾಹನು ಮಗ್ಫಿರತ್ ನೀಡಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.