ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ
Senior artist M.R. Balikai in a conversation with practitioners
ಲೋಕದರ್ಶನ ವರದಿ
ಬೆಳಗಾವಿ 08 : ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ವತಿಯಿಂದ ಧಾರವಾಡದ ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಏರಿ್ಡಸಿದ್ದಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಅವರು ಮಾತನಾಡುತ್ತ ವಿಭಾಗದ ಒಂದು ಜಿಲ್ಲೆಯಲ್ಲಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ, ಅವರ ಸಾಧನೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ‘ಸಾಧಕರೊಂದಿಗೆ ಸಂವಾದ’ ಎಂಬ ನೂತನ ಯೋಜನೆಯೊಂದನ್ನು ಪ್ರಸಕ್ತ ಸಾಲಿನಲ್ಲಿ ಜಾರಿಯಲ್ಲಿ ತಂದಿದೆ.
ಅದರಂತೆ ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಮಹಾವೀರ ರಾಯಪ್ಪ ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ ಎಂದರು.
ಎಂ.ಆರ್.ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆಯನ್ನು ಗುರುತಿಸಿ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಂ.ಆರ್.ಬಾಳಿಕಾಯಿ ಅವರು ಕುರಿತು ನಿರ್ಮಾಣಗೊಂಡ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು ಮತ್ತು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಉಪಸ್ಥಿತರಿದ್ದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಂ.ಆರ್.ಬಾಳಿಕಾಯಿ ಅವರು ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದ ಬಂದ ದಾರಿಯನ್ನು ವಿವರಿಸುತ್ತ ಸತ್ಯದ ಹಾದಿಯಲ್ಲಿ ನಡೆದರೆ ನಮ್ಮ ಜೀವನ ಸುಗಮವಾಗಿರುತ್ತದೆ. ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಿಸುತ್ತೇನೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.
ಎಷ್ಟು ಕಷ್ಟಗಳನ್ನು ಅನುಭವಿಸುತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಿಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನನ್ನ ಗುರುಗಳಾದ ಎಸ್.ಕೆ.ಭಾವನ್ನವರ ಅವರ ಮಾರ್ಗದರ್ಶನದಲ್ಲಿ ನಾನು ಚಿತ್ರಕಲೆಯನ್ನೇ ಆಯ್ಕೆಮಾಡಿಕೊಂಡು ಅದರಲ್ಲೇ ಮುಂದುವರೆದೆನು. ಪರರ ಹಣಕ್ಕೆ ಎಂದೂ ಆಸೆ ಪಡಬಾರದು. ಅನುಭವವೇ ನನ್ನ ಜೀವನಕ್ಕೆ ದಾರೀದೀಪವಾಗಿದೆ ಎಂದರು.
ಒಬ್ಬ ಕಲಾವಿದನಿಗೆ ಸಮಯ ಬಹಳ ಮುಖ್ಯವಾಗುತ್ತದೆ. ನಿಗದಿತ ಸಮಯದಲ್ಲಿ ಹಾಕಿಕೊಂಡ ಕಾರ್ಯ ಮುಗಿಯದಿದ್ದರೆ, ಅದು ಮಹತ್ವ ಕಳೆದುಕೊಳ್ಳುತ್ತದೆ. ಐ.ಎ.ಎಸ್. ಅಧಿಕಾರಿ ಸಂಜೀವಕುಮಾರ ಹಾಗೂ ಚಂದ್ರಕಾಂತ ಬೆಲ್ಲದ ಅವರ ಸಹಾಯ-ಸಹಕಾರದಿಂದ ಧಾರವಾಡದ ಸರ್ಕಾರಿ ಚಿತ್ರಕಲಾ ಶಾಲೆ ಬೆಳೆದು ಬರಲು ಕಾರಣವಾಯಿತು. ನೆರೆಹೊರೆಯವರು, ಸಮಾಜ, ಗೆಳೆಯರನ್ನು ಗೆಲ್ಲಬೇಕು. ಅವರ ಪ್ರೀತಿ-ವಿಶ್ವಾಸ ಮುಖ್ಯವಾಗುತ್ತದೆ. ಸಮಾಜ ಅದನ್ನು ನನಗೆ ಕೊಟ್ಟಿದೆ. ಅದಕ್ಕಾಗಿ ನಾನು ಸಮಾಜಕ್ಕೆ ಋಣಿಯಾಗಿದ್ದೇನೆ ಎಂದು ತಮ್ಮ ಜೀವನಾನುಭವದ ಬುತ್ತಿಯನ್ನು ಹಂಚಿಕೊಂಡರು.
ನಂತರ ಜರುಗಿದ ಸಂವಾದದಲ್ಲಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ.ಬಿ.ಎಲ್.ಚೌಹಾನ, ಪಿ.ಎಸ್.ಕಡೇಮನಿ, ಡಾ.ಎಸ್.ಸಿ.ಪಾಟೀಲ, ಎಮ್.ಎಸ್.ಚೌದರಿ, ಡಿ.ಎಂ.ಬಡಿಗೇರ, ಬಿ.ಐ.ಈಳಗೇರ ಅವರು ಪಾಲ್ಗೊಂಡು ಅನೇಕ ವಿಷಯಗಳ ಕುರಿತು ನಡೆಸಿದ ಪ್ರಶ್ನೋತ್ತರ ಗಳಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಎ.ಐ.ದಂತಹ ಬದಲಾವಣೆಗಳಿಂದುಂಟಾದ ಗೊಂದಲ, ಚಿತ್ರಕಲಾ ಶಿಕ್ಷಕರ ನೇಮಕಾತಿಯಿಂದ ಕಲಾ ಶಾಲೆಗಳು ಬಂದಾಗುತ್ತಿರುವುದು, ವಿದ್ಯಾರ್ಥಿಗಳಿಂದು ಕಲಾಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿ ಕೊಳ್ಳದೇ ಇರುವುದು ಇಂಥ ಅನೇಕ ವಿಷಯಗಳಿಗೆ ತಮ್ಮ ಅನುಭವದ ಮೂಲಕ ಕಲಾಕ್ಷೇತ್ರದ ಉಳಿಸಿ ಬೆಳೆಸುವ ಕುರಿತು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುರೇಶ ಹಾಲಭಾವಿ, ಡಾ.ಶಶಿಧರ ನರೇಂದ್ರ, ಡಾ.ಬಸವರಾಜ ಕುರಿಯವರ, ಎನ್.ಆರ್.ನಾಯ್ಕರ್, ಡಾ.ರಾಯಪ್ಪ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್.ಬಿ.ಕಂಕಣವಾಡಿ, ರಮೇಶ ಬಾಳಿಕಾಯಿ ಮುಂತಾದಂತೆ ಬಾಳಿಕಾಯಿಯವರ ಶಿಷ್ಯವರ್ಗ ಹಾಗೂ ರಂಗಾಯಣದ ರೆಪರ್ಟಿ ಕಲಾವಿದರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 