ಗರ್ಭದಿಂದ ಗೋರಿಯವರೆಗೆ ನಿಸ್ವಾರ್ಥ ಸೇವೆ ದಾದಿಯರಿಂದ ಮಾತ್ರ: ಮಂಜುಳಾ ಎನ್.ಎಸ್
Selfless service from womb to grave is only from nurses: Manjula N.S.
ಬೆಳಗಾವಿ 13: ಗ್ರಾಮೀಣ ಭಾಗದಲ್ಲಿ ಗರ್ಭದಿಂದ ಗೋರಿಯವರಿಗೆ ಸೇವೆ ಸಲ್ಲಿಸುವ ಆರೋಗ್ಯ ಸುರಕ್ಷಾ ಅಧಿಕಾರಿಗಳಿಗೆ ಜನರ ಪ್ರೀತಿಯೇ ಸುರಕ್ಷೆ ಎಂದು ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ ಎನ್.ಎಸ್. ಹೇಳಿದರು.
ಬೆಳಗಾವಿಯಲ್ಲಿ ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ಆಯೋಜಿಸಿದ್ದ ಕಿರಿಯ ಆರೋಗ್ಯ ಸಹಾಯಕಿ ಲಿಂಗೈಕ್ಯ ಶ್ರೀಮತಿ.ಸಾವಿತ್ರಿ ಬಾಬುರಾವ್ ಶಿವಪೂಜಿ ದತ್ತಿ ನಿಧಿ ಮತ್ತು ದಾದಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.ಹತ್ತು ಹಲವು ಸೌಲಭ್ಯಗಳ ಕೊರತೆಯೊಂದಿಗೆ ಗ್ರಾಮೀಣರ ಆರೋಗ್ಯದ ಕಾಳಜಿಯ ಜೊತೆಗೆ ತಮ್ಮ ಸೇವೆಯುದ್ಧಕ್ಕೂ ಸಾವಿರಾರು ಹೆರಿಗೆ ಮಾಡಿಸುವ ಮತ್ತು ಗರ್ಭಿಣಿಯ, ಬಾಣಂತಿಯ, ನವಜಾತ ಶಿಶುವಿನ ಆರೈಕೆಯಿಂದ ಹಿಡಿದು ಕೊನೆಯವರೆಗೆ ಸೇವೆ ಸಲ್ಲಿಸುವ ಆರೋಗ್ಯ ಸುರಕ್ಷಾಧಿಕಾರಿಗಳ ಅಂದರೆ ದಾದಿಯರ ಸೇವೆ ಅದ್ವಿತೀಯವಾಗಿದೆ, ಸ್ವಂತ ಕುಟುಂಬದ ಕಾಳಜಿಗಿಂತಲೂ ಹೆಚ್ಚಿನ ಸೇವೆಯನ್ನು ಸಮಾಜದ ಅದರಲ್ಲೂ ಗ್ರಾಮೀಣ ಬಡ ಜನರಿಗೆ ನೀಡುವ ಆರೋಗ್ಯ ಸುರಕ್ಷಾಧಿಕಾರಿಯವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಮಾತನಾಡಿ ಗ್ರಾಮೀಣ ಭಾಗದಲ್ಲಿ ದಾದಿಯರ ಕೈಯಲ್ಲಿ ಹೆರಿಗೆ ಮಾಡಿಸಿಕೊಂಡ ಯಾರಿಗೂ ತೊಂದರೆಯಾದದ್ದು ಇಂದಿನವರೆಗೆ ಕಂಡುಬಂದಿಲ್ಲ, ಇಂದು ಅದೆಲ್ಲ ಮರೆಯಾಗುತ್ತಾ ಬಂದಿದೆ, ಇಂದೆನಿದ್ದರೂ ಪ್ಯಾಕೇಜ್ ಹೆರಿಗೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ಯಾಕೇಜ್ ಹೆರಿಗೆ ಆದರೂ ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ಮುಟ್ಟುತ್ತಾರೆಂಬ ಗ್ಯಾರಂಟಿ ಇಲ್ಲದಂತಾಗಿದ್ದು ದುರ್ದೈವ ಎಂದರು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಎಸ್ ಜಿ ಸಿದ್ನಾಳ ಮಾತನಾಡಿ ಹಿಂದಿನಿಂದ ಇಂದಿನವರೆಗೂ ಅತ್ಯುತ್ತಮ ಸೇವೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಆಗುತ್ತಿದೆ ಆದರೂ ಇಂದು ಖಾಸಗಿ ಆಸ್ಪತ್ರೆಗಳಿಗೆ ತೆರಳುವವರು ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಕಿರಿಯ ಆರೋಗ್ಯ ಸಹಾಯಕಿಯರಾಗಿ ಸೇವೆ ಸಲ್ಲಿಸಿದ ಕಲಾವತಿ ಕಾದ್ರೋಳಿ, ಸುಲೋಚನಾ ಕುಲಕರ್ಣಿ, ಅನುಸೂಯಾ ಬೆಣ್ಣಿ ನಾವಿ, ಸುಮಿತ್ರಾ ಬಿರಾದರ್ ಪಾಟೀಲ ಮತ್ತು ಶಮೀಮ ಭಾಗವಾನ ಅವರುಗಳನ್ನು ಸತ್ಕರಿಸಲಾಯಿತು.
ಸಂಗೀತಾ ಮುರುಗೇಶ ಶಿವಪೂಜಿ ಗ್ರಾಮೀಣ ಭಾಗದಲ್ಲಿ ತಮ್ಮ ತಾಯಿಯೊಂದಿಗಿನ ಅನುಭವ ಹಂಚಿಕೊಂಡರು. ಸನ್ಮಾನಿತರ ಪರವಾಗಿ ಕಲಾವತಿ ಕಾದ್ರೊಳ್ಳಿ ಮಾತನಾಡಿದರು. ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಮತ್ತು ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಲೇಖಕೀಯರ ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೆದ ಸ್ವಾಗತಿಸಿದರು, ಕಾರ್ಯದರ್ಶಿ ಆಶಾ ಯಮಕನಮರಡಿ ನಿರ್ವಹಿಸಿದರು, ಖಜಾಂಚಿ ಅನ್ನಪೂರ್ಣ ಹಿರೇಮಠ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 