ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆ
ಲೋಕದರ್ಶನ ವರದಿ
ಬೀಳಗಿ, ಸೆ.18: ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಕುಮಾರ ಪ್ರಶಾಂತ ಬಿರಾದಾರ, ಸುನೀಲ್ ಕೆಳಗಡೆ ಹಾಗೂ ಶ್ರೇಯಸ್ ನುಚ್ಚಿನ್, ಬಾಲಕಿಯರ ವಿಭಾಗದಲ್ಲಿ ಕುಮಾರಿ ಸವಿತಾ ಹಿರೇಮಠ, ಶ್ರೀವೈಷ್ಣವಿ ಪಾಟೀಲ, ಸಂಜನಾ ಚವಾಣ, ತನುವಶ್ರೀ ಶೇಲಾರ ಹಾಗೂ ಸಿಂಚನಾ ಕಾಂಬಳೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತರಬೇತಿ ನೀಡಿದ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ, ಆಡಳಿತಾಧಿಕಾರಿ ವಿ.ಎಸ್. ಮೇಟಿ, ಪ್ರಾಚಾರ್ಯ ಜಿ.ಆರ್. ಪಾಟೀಲ ಸೇರಿದಂತೆ ಸಿಬ್ಬಂದಿ ಅಭಿನಂದಿಸಿದ್ದಾರೆ.