ದ್ವಿತೀಯ ಪಿ.ಯು.ಸಿ. ಫಲಿತಾಂಶ

ಗದಗ 29:  ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು ನಗರದ ಸರಕಾರಿ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಮರು ಮೌಲ್ಯಮಾಪನದ ನಂತರ ಕಲಾ ವಿಭಾಗದಲ್ಲಿ ಪವಿತ್ರಾ ಹೊಸಳ್ಳಿ (590), ಪ್ರೇಮಾ ಕವಲೂರ (589) ರಾಜ್ಯ ಮಟ್ಟದಲ್ಲಿ ಕ್ರಮವಾಗಿ ಏಳು ಮತ್ತು ಎಂಟನೇ ರಾ​‍್ಯಂಕ್ ಮತ್ತು ಶಬೀನಾ ಬಳ್ಳಾರಿ (585) ಜಿಲ್ಲಾ ಮಟ್ಟದಲ್ಲಿ ತೃತೀಯ ರಾ​‍್ಯಂಕ್ ಬಾಚಿಕೊಂಡು ಗಮನಾರ್ಹ ಸಾಧನೆ ಗೈದಿದ್ದಾರೆ.   

ವಾಣಿಜ್ಯ ವಿಭಾಗದಲ್ಲಿ ಮೆಹಕ್ ಮುಜಾವರ (578), ಸಹನಾ ಲಕ್ಕುಂಡಿಮಠ (568) ಮತ್ತು ಕಾವೇರಿ ಹಡಪದ (566) ಕಾಲೇಜು ಹಂತದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ರಾ​‍್ಯಂಕ್ ಪಡೆದಿದ್ದಾರೆ.  

ವಿಜ್ಞಾನ ವಿಭಾಗದಲ್ಲಿ ಆಯೇಷಾಬೇಗಂ ಮುಳಗುಂದ (579) ಮತ್ತು ಕಿರಣಗೌಡ ನಡಮನಿ (579) ಪ್ರಥಮ, ಬಸವರಾಜ ಬಾರಕೇರ (578) ಮತ್ತು ವಿನಯ ಖನ್ನೂರ (578) ದ್ವಿತೀಯ ಹಾಗೂ ಮುಸ್ಕಾನ್ ತಹಶೀಲದಾರ (576) ತೃತೀಯ ರಾ​‍್ಯಂಕ್ ಪಡೆದಿದ್ದಾರೆ. 

 ಕಾಲೇಜಿನ ಒಟ್ಟು ಫಲಿತಾಂಶ ಪ್ರತಿಶತ 99 ಆಗಿದ್ದು ಕಲಾ 97.7ಅ ವಾಣಿಜ್ಯ 100ಅ ಮತ್ತು  ವಿಜ್ಞಾನ 98.9ಅ ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 387 ವಿದ್ಯಾರ್ಥಿಗಳಲ್ಲಿ 383 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 161 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಉಪ ನಿರ್ದೇಶಕರಾದ ಜಿ. ಎನ್‌. ಕುರ್ತಕೋಟಿ, ಪ್ರಾಚಾರ್ಯೆ ಪೂರ್ಣಿಮಾ ಹೊಸಮನಿ ಮತ್ತು ಉಪನ್ಯಾಸಕ ವೃಂದದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.