ಕುಡಗೋಲು ಮಟ್ಟಿ ಯೋಜನೆ: ರೈತರ ಭೂಮಿಗೆ ನೀರು

ಕುಡಗೋಲು ಮಟ್ಟಿ ಯೋಜನೆ: ರೈತರ ಭೂಮಿಗೆ ನೀರು Scythe irrigation scheme: Water for farmers' land

ಲೋಕದರ್ಶನ ವರದಿ 

ಹೂವಿನಹಡಗಲಿ 26:   ಕಳೆದ 16 ವರ್ಷಗಳಿಂದ ನೆನಗೊದಿಗೆ ಬಿದ್ದಿದ್ದ ಕುಡಗೋಲು ಮಟ್ಟಿ ಏತನೀರಾವರಿ ಯೋಜನೆ ಇಂದು ಆರಂಭಗೊಂಡಿರುವುದಕ್ಕೆ ರೈತರು ಹರ್ಷ ಅಗತ್ಯಪಡಿಸಿದ್ದಾರೆ. ಯೋಜನಾ ಪ್ರದೇಶದಲ್ಲಿ ಸೇರಿದ ಕೆ ಆರ್ ಎಸ್ ಪಕ್ಷ ಹಾಗೂ ರೈತ ಸಂಘದ ಪದಾಧಿಕಾರಿಗಳು ವಿಜಯದ ಸಂಕೇತವನ್ನು ತೋರಿಸಿ ಸಂತಸವನ್ನು ವ್ಯಕ್ತಪಡಿಸಿದರು.ನಮ್ಮ ಸಂಘಟನೆಗಳ ಹೋರಾಟಗಳ ಫಲವಾಗಿ ಫಲವಾಗಿ ಮತ್ತೆ ಜೀವ ಪಡೆದು ರೈತರ ಜಮೀನುಗಳಿಗೆ ನೀರು ಹರಿದಿರುವುದು ನಮಗೆ ಖುಷಿ ತಂದಿದೆ ಎಂದರು ಮಲ್ಲಿಗೆ ನಾಡಿನ ಸಮಸ್ತ ರೈತರ ಪರವಾಗಿ, ಈ ಮಹತ್ವದ ಯೋಜನೆಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯ ನಮನಗಳು ತಿಳಿಸುವುದಾಗಿ ಹೇಳಿದರು.

ಇದು ಕೇವಲ ಒಂದು ನೀರಾವರಿ ಯೋಜನೆಯ ಆರಂಭವಲ್ಲ ಈ ಭಾಗದ ರೈತರ ಜೀವನ ಉತ್ಸಾಹಕ್ಕೆ ದಾರಿಯಾಗಿದೆ ಎಂದರು. ದಿವಂಗತ ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ಅವರ ದೂರದೃಷ್ಟಿಯ ಕನಸು ನನಸಾದ ಮಹತ್ವದ ದಿನ ಬರದ ಭೂಮಿಗೆ ನೀರಿನ ಜೀವ ತುಂಬಿ, ಸುಮಾರು 3000 ಎಕರೆ ಜಮೀನಿಗೆ ತುಂಗಭದ್ರ ಹರಿಯುವುದು ನಮಗೆಲ್ಲ ಸಂತಸ ತಂದಿದೆ ಎಂದರು ಈಹೋರಾಟಕ್ಕೆ ಸ್ಪಂದಿಸಿದ ವರ್ಗದವರಿಗೂ ಹೇಳಿದರು. ಹಾಗೂ ಪತ್ರಿಕ ಬಳಗದವರಿಗೂ ಕೃತಜ್ಞತೆ ಸಲ್ಲಿಸುವುದಾಗಿಕೆ ಆರ್ ಎಸ್ ಪಕ್ಷದ ಚಂದ್ರಶೇಖರ್ ದೊಡ್ಡಮನಿ ಮಾತನಾಡಿ 2018ರಿಂದ ಈ ಯೋಜನೆ ಕುರಿತು ಹೋರಾಟ ಮಾಡುತ್ತ ಬಂದಿದ್ದೇವೆ.

ಇಂದು ನಮ್ಮ ಹೋರಾಟ ಫಲಪ್ರದವಾಗಿದ್ದು ಇದಕ್ಕೆ ಸಹಕರಿಸಿದ ಅಧಿಕಾರಿ ವರ್ಗದವರಿಗೆ ಮತ್ತು ಪತ್ರಿಕಾ ಬಳಗಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಯೋಜನಾ ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಮುಚ್ಚಿ ಹೋಗಿರುವ ಕಾಲುವೆಗಳನ್ನ ತೆರವುಗೊಳಿಸಿ ಸರಾಗವಾಗಿ ನೀರು ಹರಿಯಲು ಸಹಕರಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಇಬ್ರಾಹಿಂ ಕರೆಂಗಿ, ಸುಭಾನ್ ಸಾಬ್ ಹೂಗುಲೂರು, ವಿಶ್ವನಾಥ್ ಉತ್ತಂಗಿ,  ರಾಜ್ಯ ರೈತ ಸಂಘ ತಾಲೂಕ ಅಧ್ಯಕ್ಷರು ಸಿದ್ದಪ್ಪ ಹೊಸಮನಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಎಂ.ಹೊಳಗುಂದಿ , ಗೀರೀಶ್ ಡಿ. ಅಂಗೂರು ರೈತರಾದ ಟಿ ಬಸವರಾಜ್, ದೇವಪ್ಪ, ಶ್ರೀನಿವಾಸ ದೊಡ್ಡಮನಿ, ಮಂಜುನಾಥ್, ಸುರೇಶ  ಇದ್ದರು.