ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೂರು ದಿನ ದಸರಾ ಶಿಬಿರ ಉದ್ಘಾಟನೆ

ಮುಂಡರಗಿ 09: ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳು ಪಠ್ಯದ ಜೊತೆಗೆ ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಸಹೋದರತ್ವ ಮತ್ತು ಸಹಕಾರ ಮನೋಭಾವನೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಹೇಳಿದರು.  

ಪಟ್ಟಣದ ಎಸ್‌.ಎಂ.ಭೂಮರಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ 3 ದಿನಗಳ ದಸರಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಜಾ ಅವಧಿಯಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳ ಶಿಬಿರವನ್ನು ಏರಿ​‍್ಡಸಿರುವುದು ಶಿಕ್ಷಕರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಈ ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ವೀರಣ್ಣ ಮಡಿವಾಳರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಎಂ.ಪಿ.ಶೀರನಹಳ್ಳಿಯವರು ದಸರಾ ಶಿಬಿರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಎಸ್‌.ಎನ್‌.ಪಾಟೀಲ, ಅಧ್ಯಕ್ಷ ಎ.ಡಿ.ಬಂಡಿ, ಬಿ.ಆರಿ​‍್ಪ ಬಿ.ಎಚ್‌.ಸೂಡಿ, ಸಿ.ಆರಿ​‍್ಪ ಎಸ.ಡಿ.ಬಸೇಗೌಡ್ರ, ಎನ್‌.ಎಂ.ಕುಕನೂರ, ವಿ.ಎಚ್‌.ಹೊಳಿಯಮ್ಮನವರ ಮಾತನಾಡಿದರು. ಕಾರ್ಯದರ್ಶಿ ಜಗದೀಶ ಗುಳಾರಿ ಕಾರ್ಯಕ್ರಮ ನಿರೂಪಿಸಿದರು. ಏಸ್‌.ಬಿ.ಗದಗ, ವೈ.ಎಚ್‌.ವಾಲಿಕಾರ, ವೀರೇಶ ಉಮಚಗಿ. ಎಸ್‌.ಕೆ. ರಾಜೂರ ಗುರುಗಳು ಹಾಗೂ ರೋಟರಿ ಶಾಲೆ ಮತ್ತು ಭೂಮರಡ್ಡಿ ಶಾಲೆಯ ಮಕ್ಕಳು ಹಾಜರಿದ್ದರು.