ರೈಲ್ವೆ ಹಳೆಯ ಮೇಲೆ ಕೆಟ್ಟುನಿಂತ ಶಾಲಾ ವಾಹನ

ರೈಲ್ವೆ ಹಳೆಯ ಮೇಲೆ ಕೆಟ್ಟುನಿಂತ ಶಾಲಾ ವಾಹನ  School vehicle stalled on the railway tracks

ಲೋಕದರ್ಶನ ವರದಿ   

ಇಂಡಿ 05: ರೈಲ್ವೆ ಹಳೆಯ ಮೇಲೆ ಶಾಲಾ ವಾಹನವೊಂದು ಕೆಟ್ಟುನಿಂತ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲಸಂಗಿ ಪ್ರತಿಷ್ಠಿತ ನಾಗಭೂಷಣ ಸ್ವಾಮಿ ಇಂಟರ್ ನ್ಯಾಷನಲ್ ಸ್ಕೂಲ್ ನ ಶಾಲಾ ವಾಹನ ವೆಂದು ತಿಳಿದು ಬಂದಿದೆ. ಶಾಲಾ ವಾಹನದಲ್ಲಿ ಸರಿ ಸುಮಾರು ಇಪ್ಪತ್ತರಿಂದ ಇಪ್ಪತೈದು ಮಕ್ಕಳು ಪ್ರಯಾಣಿಸುತ್ತಿದ್ದರು. ಶಾಲಾ ವಾಹನ ರೈಲು ಮಾರ್ಗವನ್ನು ದಾಟುತ್ತಿದ್ದ ಈ ಅವಘಡ ಸಂಭವಿಸುತ್ತಿರುವ ತಪ್ಪಿದಂತಾಗಿದೆ. ಅದೃಷ್ಟ ವಷಾತ ಯಾವುದೇ ಅನಾಹುತ ಸಂಭವಿಸಿಲ್ಲ ಶಾಲಾ ವಾಹನದಲ್ಲಿದ ಎಲ್ಲಾ ಮಕ್ಕಳು ಘೋರ ಅನಾಹುತದಿಂದ ಪಾರಾಗಿದ್ದಾರೆ. 

ಈ  ಶಾಲಾ ವಾಹನವು ಹಲಸಂಗಿ ಯಿಂದ ಲಚ್ಯಾಣ ಮಾರ್ಗವಾಗಿ ಶಿರಗೂರ ಮತ್ತು ಗುಬ್ಬೆವಾಡ ಗ್ರಾಮದ ಮಕ್ಕಳನ್ನು ಶಾಲೆ ಮುಗಿದ ನಂತರ ಮರಳಿ ಮನೆಗೆ ಕಳುಹಿಸಲು ಹೊರಟಿತ್ತು. ಲಚ್ಯಾಣ ಗ್ರಾಮದ ಲೇವಲ ಕ್ರಾಸಿಂಗ್ ಗೆಟ್ ದಾಟುವಾಗ ಬಸ್ ಅಚಾನಕ್ಕಾಗಿ ವಾಹನದ ಇಂಜನ್ ಕೆಟ್ಟು ನಿಂತಿದೆ. ಇದನ್ನು ನೋಡಿದ ಸ್ಥಳೀಯ ಗ್ರಾಮಸ್ಥರು ಸಹಾಯಕ್ಕೆ ಬಂದು ಶಾಲಾ ಮಕ್ಕಳಿದ್ದ ವಾಹನವನ್ನು ಕೈ ಯಿಂದ ತಳ್ಳಿ ಪಕ್ಕಕ್ಕೆ ನಿಲ್ಲಿಸಿದ್ದಾರೆ. ವಾಹನದ ಚಾಲಕನನ್ನು ತರಾಟೆಗೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ಅವನು ವಾಹಾನ ತುಂಬಾ ಹಳೆಯದು ಗೇರ್ ಬಿಳುತ್ತಿಲ. ರೈಲು ಹಳಿಗಳ ಸಮಿಪದಲ್ಲಿ ರಸ್ತೆ ಹಂಪ ಇರುವುದರಿಂದ ಬಸ್ ನಿಧಾನವಾಗಿ ಚಲಿಸಬೇಕಿತ್ತು. ಆವಾಗ ಗೇರ್ ಬೀಳಲಿಲ್ಲ ಎಂದು ತಿಳಿಸಿದ್ದಾನೆ.  

ಸ್ಥಳೀಯರು ಶಾಲಾ ವಾಹನದ ಒಳಗೆ ನೋಡಿದರೆ ನೀರು ತುಂಬಿಕೊಂಡಿದೆ ವಾಹನದ ಮೇಲ್ಛಾವಣಿ ಹರಿದು ಹೋಗಿದೆ ಕಿಟಕಿಯ ಗಾಜುಗಳು ಸಹ ಇಲ್ಲ. ಮಕ್ಕಳ ಮೈಯಲ್ಲ ಒದ್ದೆಯಾಗಿದೆ. ಇಂತಹ ವಾಹನ ಶಾಲಾ ಆಡಳಿತ ಮಂಡಳಿಯು ದೂರದ ವಿದ್ಯಾರ್ಥಿಗಳನ್ನು ಶಾಲೆಗೆ ದಿನಾಲೂ ಪ್ರಯಾಣಿಸಲು ಕಳುಹಿಸುತ್ತಿರುವುದು ವಿಪರ್ಯಾಸವೇ ಸರಿ.  ಸರಕಾರದ ಮಾರ್ಗ ಸೂಚಿಯಂತೆ ಹಳೆ ವಾಹನಗಳನ್ನು ಬಳಸುವಂತಿಲ್ಲ ಆದರೂ ಶಾಲಾ ಆಡಳಿತ ಮಂಡಳಿ ತಮ್ಮ ಲಾಭಕೊಸ್ಕರ ಇಂಥಾ ವಾಹನಗಳನ್ನು ಬಳಸುವುದು ಎಷ್ಟು ಸರಿ? ಮುದ್ದು ಕಂದಮ್ಮಗಳ ಜೀವದ ಜೊತೆ ಚೆಲ್ಲಾಟ ವಾಡುವುದು ಸರಿಯಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲಾ ಆಡಳಿತ ಮಂಡಳಿಯ ಮೇಲೆ ಸೂಕ್ತ ಕ್ರಮ ಕ್ರಮಕೈಗೊಳ್ಳಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.