ಸವದತ್ತಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಕುಖ್ಯಾತ ಕಳ್ಳನ ಬಂಧನ
Savadatti police conduct massive operation: Notorious thief arrested
ಸವದತ್ತಿ: ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಸರಗಳ್ಳತನ ಹಾಗೂ ಸವದತ್ತಿ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪಕ್ಕೀರಪ್ಪ ಅಲಿಯಾಸ್ ದರ್ಶನ ಗಂಗಪ್ಪ ಕಂಬಳಿ ಎಂಬ ಆರೋಪಿಯನ್ನು ಬಂಧಿಸಿ, ಸುಮಾರು 8,95,250 ರೂಪಾಯಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.ಜನವರಿ 4 ರಂದು ಮಧ್ಯಾಹ್ನ 1:15 ರ ಸುಮಾರಿಗೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಶ್ರೀಮತಿ ರೇಣುಕಾ ಲಕ್ಷ್ಮಣ ನಂದಿ ಎಂಬುವವರು ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ಜನಸಂದಣಿಯ ಲಾಭ ಪಡೆದ ಕಳ್ಳರು ಅವರ ಕೊರಳಲ್ಲಿದ್ದ ₹80,000 ಮೌಲ್ಯದ 10 ಗ್ರಾಂ ತೂಕದ ಚಿನ್ನದ ತಾಳಿಗಳನ್ನು ಕಳ್ಳತನ ಮಾಡಿದ್ದರು.
ಈ ಬಗ್ಗೆ ಜನವರಿ 5 ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಮತ್ತು ಬೆಳಗಾವಿ ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ರಾಮದುರ್ಗ ಡಿವೈಸ್ಪಿ ಚಿದಂಬರ ಮಡಿವಾಳರ, ಇವರ ಮಾರ್ಗದರ್ಶನದಲ್ಲಿ, ಸವದತ್ತಿ ಪಿಐ ಸುರೇಶ ಬೆಂಡೆಗುಂಬಳ ಹಾಗೂ ತಂಡದವರು ಮಾರ್ಚ್ 29 ರಂದು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:ಬಂಗಾರದ ಆಭರಣಗಳು: 46 ಗ್ರಾಂ (ಮೌಲ್ಯ ₹6,90,000)ಬೆಳ್ಳಿಯ ಆಭರಣಗಳು: 675 ಗ್ರಾಂ (ಮೌಲ್ಯ ₹1,55,250) ಒಂದು ಮೋಟಾರ್ ಸ್ಕೂಟರ್ (ಮೌಲ್ಯ ₹50,000) ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ಮತ್ತು 2 ಸ್ಕ್ರೂ ಡ್ರೈವ್ ಈ ಕಾರ್ಯಾಚರಣೆಯ ಸವದತ್ತಿ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಸರಗಳ್ಳತನ (ಸೂಲಿಗೆ) ಹಾಗೂ ನಾಲ್ಕು ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.ಸವದತ್ತಿ ಪಿಐ ಸುರೇಶ ಬೆಂಡೆಗುಂಬಳ, ಪಿಎಸ್ಐಗಳಾದ ಕಲ್ಮೇಶ ಬನ್ನೂರ, ಲಕ್ಷ್ಮಣ ಗೌಡಿ ಹಾಗೂ ಸಿಬ್ಬಂದಿಗಳಾದ ಉದ್ದಪ್ಪ ಪೂಜೇರ, ಅಮರ ಸಾರಾಪೂರೆ, ಮಹೇಶ ಮಾಳಳ್ಳಿ ಮತ್ತು ತಾಂತ್ರಿಕ ತಂಡದ ವಿನೋದ ಚಿಕ್ಕಣ್ಣವರ, ಸಚೀನ ಪಾಟೀಲ, ಅವರನ್ನೊಳಗೊಂಡ ತಂಡದ ಈ ಸಾಹಸಮಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 