ಕಿನ್ನರ ಗ್ರಾಮಕ್ಕೆ ಬಂದ ಉಪ್ಪನೀರು: ಬಿಸಲ ಝಳಕ್ಕೆ ಭರತ ಹೆಚ್ಚಳ
Salt water came to Kinnara village: Bharat increase for Summer heat
ಕಾರವಾರ 04: ಕಾರವಾರ ತಾಲೂಕಿನ ಕಿನ್ನರ ಗ್ರಾಮಕ್ಕೆ ಕಾಳಿ ನದಿಯ ಹಿನ್ನೀರು ನುಗ್ಗಿದ್ದು, ಗ್ರಾಮದ ಕೃಷಿ ಜಮೀನು, ಬಾವಿಗಳು ಉಪ್ಪು ನೀರು ಮಿಶ್ರಿತವಾಗಿವೆ. ಪರಿಣಾನ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ.
ರವಿವಾರ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರಿನಿಂದ ಕೃಷಿ ಜಮೀನು ಸಂಪೂರ್ಣ ಉಪ್ಪು ನೀರು ಮಿಶ್ರಿತವಾಗಿತ್ತು. ಇದಕ್ಕೆ ಬಿಸಿಲ ಝಳ ಹೆಚ್ಚಿದ್ದು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಪ್ರತಿ ದಿನ ಸಮುದ್ರದ ಭರತದ ಸಂದರ್ಭದಲ್ಲಿ ಕಾಳಿ ನದಿ ನೀರು ಉಕ್ಕುತ್ತದೆ. ಭರತ ಮತ್ತು ಇಳಿತ ಸಮುದ್ರ, ನದಿ ಸೇರುವ ತಾಣದಲ್ಲಿ ಸಹಜ ಕ್ರಿಯೆ. ಇದು ನದಿ ದಡದ ಹಳ್ಳಿಗಳಲ್ಲಿ ಕಾಣುವ ಕ್ರಿಯೆ. ಆದರೆ ಈ ಬಾರಿ ಬಿಸಿಲ ತಾಪ ಹೆಚ್ಚಾಗಿರುವುದರಿಂದ ನದಿ ಹಿನ್ನೀರು, ನದಿ ದಂಡೆಯ ಗ್ರಾಮಗಳಿಗೂ ನುಗ್ಗಿದ್ದು ಸಮಸ್ಯೆಯನ್ನು ಮಾರ್ಚ್‌ನಲ್ಲಿ ಸೃಷ್ಟಿಸಿದೆ. ಮೇ ತಿಂಗಳಲ್ಲಿ ನದಿ ದಂಡೆಯ ಹಿನ್ನೀರು ಗ್ರಾಮಗಳಲ್ಲಿ ಆಗುವ ಸಮಸ್ಯೆ ಈಗಲೇ ಎದುರಾಗಿದೆ. ಇದರಿಂದ ಕಿನ್ನರ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 