ನೇಸರಗಿ 15: ಗ್ರಾಮದ ಕುಮಾರಿ ಸಹನಾ ಸಂತೋಷ ಪಾಟೀಲ ಇವಳು ಸಿ ಬಿ ಎಸ್ ಸಿ 10ನೇ ತರಗತಿ ಪರೀಕ್ಷೆಯಲ್ಲಿ 97ಅ ಅಂಕ ಪಡೆದು ಬೈಲಹೊಂಗಲದ ಕಲ್ಪವೃಕ್ಷ ಮಾದರಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಕಲ್ಪವೃಕ್ಷ ಮಾದರಿ ಶಾಲೆಗೆ ಮತ್ತು ನೇಸರಗಿ ಗ್ರಾಮಕ್ಕೆ, ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ಗ್ರಾಮೀಣ ಮೂಲದ, ಸರಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಕೇಂದ್ರ ಮಾದರಿ ಪಠ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ ಗ್ರಾಮದ ಹಿರಿಯರು, ಶಿಕ್ಷಕ ಬಳಗ ಹರ್ಷ ವ್ಯಕ್ತ ಪಡಿಸಿದ್ದಾರೆ.