ಸಡಗರದ ಮೊಹರಂ ಜಾತಿ - ಧರ್ಮ ಮರೆತು ಸಾರಿದ ಭಾವೈಕ್ಯತೆಯ ಸಂದೇಶ
Sadagara's Muharram message of unity, forgetting caste and religion
ಸವದತ್ತಿ 26 : ಪವಿತ್ರ ಮೊಹರಂ ಹಬ್ಬವನ್ನು ರಾಮಾಪೂರಸೈಟ್, ನಡುವಿನಹಳ್ಳಿ ಮತ್ತು ಹಡಗಲಿ, ಭಾಗದ ಹಿಂದೂ-ಮುಸ್ಲಿಂ ಸಮುದಾಯದವರು ಜಾತಿ-ಧರ್ಮದ ಭೇದ ಮರೆತು, ಪರಸ್ಪರ ಸೌಹಾರ್ದತೆಯಿಂದ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.ನಗರದ ರಾಮಾಪೂರಸೈಟ್,ನಡುವಿನಹಳ್ಳಿಯ, ಲಾಲಶಾವಲಿ ಡೋಲಿ ಮತ್ತು ಮೌಲಾಅಲಿ ಪಂಜಾಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಸಂಪ್ರದಾಯಬದ್ಧವಾಗಿ ನಡೆದ ಮೊಹರಂ ಮೆರವಣಿಗೆಯಲ್ಲಿ ಯುವಕರು, ಹಿರಿಯರು ಸೇರಿದಂತೆ ಸರ್ವಧರ್ಮೀಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಡೋಲು ಮತ್ತು ನಗಾರಿಗಳ ಸದ್ದಿಗೆ ಭಕ್ತರು ಹೆಜ್ಜೆ ಹಾಕುತ್ತಾ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಪಂಜಾಗಳು ಮನೆ-ಮನೆಗೆ ಭೇಟಿ ನೀಡಿದಾಗ, ಹಿಂದೂ ಬಾಂಧವರು ಮುಸ್ಲಿಂ ಸಮುದಾಯದವರೊಂದಿಗೆ ಕೈಜೋಡಿಸಿ ಪಂಜಾಗಳಿಗೆ ಪೂಜೆ ಸಲ್ಲಿಸಿದರು. ಭಕ್ತರು ಲೋಬಾನ, ಅಗರಬತ್ತಿ ಅರ್ಿಸಿ ತಮ್ಮ ಭಕ್ತಿ ಸಮರ್ಿಸಿದರು. ದೇವರಿಗೆ ಮೊಹರೆ (ನೈವೇದ್ಯ) ಸಲ್ಲಿಸುವ ಮೂಲಕ ಧಾರ್ಮಿಕ ಶ್ರದ್ಧೆಯನ್ನು ಪ್ರಕಟಿಸಿದರು. ಸಮಾಜದ ಗಣ್ಯರು ಪಾಲ್ಗೊಂಡು, ಸವದತ್ತಿ ಭಾಗದ ಅನ್ಯೋನ್ಯತೆ ಮತ್ತು ಸಾಮರಸ್ಯದ ಸಂಸ್ಕೃತಿಯನ್ನು ಕೊಂಡಾಡಿದರು.ಸಂಜೆ ನಡೆದ ಸವಾರಿಯೊಂದಿಗೆ ಪಂಜಾ ಮತ್ತು ಡೋಲಿಗಳ ಮೆರವಣಿಗೆ ಸಂಪನ್ನಗೊಂಡಿತು.
ಈ ವೇಳೆ ಭಕ್ತರು ಅಲವಿದಾ, ಅಲವಿದಾ, ಎಂದು ಹಾಡುತ್ತಾ, ಭಾವಪೂರ್ಣ ವಿದಾಯ ಕೋರಿದರು.ಹಬ್ಬದ ಆಚರಣೆಯು ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಪೊಲೀಸ್ ಇಲಾಖೆಯು ನಗರಾದ್ಯಂತ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಶಾಂತಿಯುತವಾಗಿ ನಡೆದ ಈ ಹಬ್ಬವು ಸವದತ್ತಿಯ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು.ಈ ಸಂದರ್ಭದಲ್ಲಿ ಊರಿನ ಗಣ್ಯರು, ಧಾರ್ಮಿಕ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 