ಹೂವಿನ ಹಡಗಲಿ

ಎಸ್ಸೆಸ್ಸೆಲ್ಸಿ: ಪರೀಕ್ಷೆ ಉತ್ತಮ ಫಲಿತಾಂಶ ಸುಧಾರಣೆಗೆ ತರಬೇತಿ

ಎಸ್ಸೆಸ್ಸೆಲ್ಸಿ: ಪರೀಕ್ಷೆ ಉತ್ತಮ ಫಲಿತಾಂಶ ಸುಧಾರಣೆಗೆ ತರಬೇತಿ

                       ಹೂವಿನ ಹಡಗಲಿ  22:   22- 2026 ಮಾರ್ಚ್‌ ಏಪ್ರಿಲ್ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಮುಂದಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು. ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಷಯ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ನೀಲ ನಕಾಶೆ ಬದಲಾವಣೆ ಮಾಡಿದ್ದಾರೆ.

                          ವಿದ್ಯಾರ್ಥಿಗಳಿಗೆ ಇದರ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಪ್ರತಿ ವಿಷಯದಲ್ಲೂ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಶಾಲಾ ಲಾಗಿನ್ ನಲ್ಲಿ ಲಭ್ಯ ಇವೆ. ಶಿಕ್ಷಕರು ಇದರ ಸದುಪಯೋಗ ಪಡಿಸಿಕೊಂಡು ಫಲಿತಾಂಶ ಉತ್ತಮ ಪಡಿಸಲು ಕ್ರಮ ವಹಿಸಲು ತಿಳಿಸಿದೆ. ಬೆಳಗಿನ ವಿಶೇಷ ತರಗತಿ ಸಂಜೆ ಗುಂಪು ಅಧ್ಯಯನ ಸೇರಿದಂತೆ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳನ್ನು ಪರಿಣಾಮವಾಗಿ ಜಾರಿಗೆ ತರಬೇಕು ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಮಾತನಾಡಿ ನೀಲ ನಕಾಶೆ ಅನ್ವಯ ಈ ಬಾರಿ ಅಂಕಗಳನ್ನು ಸುಲಭವಾಗಿ ಗಳಿಸಿ ಮಕ್ಕಳು ಉತ್ತೀರ್ಣರಾಗಬಹುದು.

                     ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಪಾಸಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಿ ಎಂದರು.ಡಯಟ್ ಅಧಿಕಾರಿಗಳಾದ ಮಯೂರ ಗದುಗಿನ, ನಿಂಗಪ್ಪ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹಣ್ಣಿ ನರೇಶ ಇ ಸಿ ಒ ಮಿಟ್ಯಾನಾಯ್ಕ್ಬಿ ಆರ್ ಪಿ ಸಚಿನ್ ಆರಾಧ್ಯ ಇದ್ದರು.ಸಂಪನ್ಮೂಲ ಶಿಕ್ಷಕರಾದ ಮಂಜುನಾಥ ಕೆ (ಕನ್ನಡ)ಸಹದೇವಪ್ಪ ವೈ (ಆಂಗ್ಲ)ಸಣ್ಣಹಾಲೇಶ (ಹಿಂದಿ)ಕೋರಿ ವಿಶ್ವನಾಥ್ (ಗಣಿತ)ಬಸವನಗೌಡ (ವಿಜ್ಞಾನ)ಅನ್ನದಾನ ಸ್ವಾಮಿ (ಸಮಾಜ)ತರಬೇತಿ ನೀಡಿದರು. ಮೊದಲ ದಿನ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಭಾಷಾ ವಿಷಯ ಹಾಗೂ ಎರಡನೇ ದಿನಎಸ್ ಕೆ ಜಿ ಜಿ ಪ್ರೌಢಶಾಲೆಯಲ್ಲಿ ಐಚ್ಛಿಕ ವಿಷಯಗಳ ಎಸ್ಸೆಸ್ಸೆಲ್ಸಿ ಬೋಧಿಸುವ ವಿಷಯ ಶಿಕ್ಷಕರು ತರಬೇತಿ ಪಡೆದುಕೊಂಡರು. 


ಸುದ್ದಿ ಓದಿ