ಎಸ್‌.ಡಿ.ವ್ಹಿ.ಎಸ್‌. ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿ ಹುಟ್ಟು ಹಬ್ಬ ಆಚರಣೆ

ಎಸ್‌.ಡಿ.ವ್ಹಿ.ಎಸ್‌. ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿ ಹುಟ್ಟು ಹಬ್ಬ ಆಚರಣೆ S.D.V.S. A grand birthday celebration at the educational institution of the Sangha

ಲೋಕದರ್ಶನ ವರದಿ

ಸಂಕೇಶ್ವರ 15:   ವಿನಯಗೌಡಾ ಅಪ್ಪಯ್ಯಗೌಡಾ ಪಾಟೀಲ ಇವರ ಹುಟ್ಟುಹಬ್ಬವನ್ನು ಎಸ್‌.ಡಿ.ವ್ಹಿ.ಎಸ್‌. ಸಂಘದ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಪ್ರಾಚಾರ್ಯರು ಮತ್ತು ರಾಜಕೀಯ ಮುಖಂಡರು ಸಂಘದ ಕಛೇರಿಯಲ್ಲಿ ಬಂದು ಅವರ ಕೊರಳಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಹಸ್ತಲಾಘವ ಮಾಡಿ ಅವರ ಅಭಿಮಾನಿಗಳು ಕೇಕ ಕತ್ತರಿಸುವ ಮೂಲಕ ಅವರಿಗೆ ಭಗವಂತನು ಆಯುಶ್ಯ ಆರೋಗ್ಯ ನೀಡಲೆಂದು ಎಲ್ಲ ಅಭೀಮಾನಿಗಳು ಶುಭ ಹಾರೈಸಿದರು. ಆರ್ಟ್ಸ ಸಾಯನ್ಸ ಕಾಮರ್ಸ ಕಾಲೇಜಿನಲ್ಲಿ ಪ್ರಾಚಾರ್ಯರು ಸಂಚಾಲಕರು ಆಡಳಿತ ಅಧಿಕಾರಿ ಡಾ. ಬಿ.ಎ. ಪೂಜಾರಿ, ಸಂಘದ ಕಾರ್ಯದರ್ಶಿ ಜಿ.ಎಸ್‌. ಕೋಟಗಿ, ಇನ್ನುಳಿದ ಪ್ರಾಚಾರ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು,

ಇವರೆಲ್ಲರೂ ಸೇರಿ ಹುಟ್ಟು ಹಬ್ಬದ ಸಮಾರಂಭವನ್ನು ಅತಿ ವಿಜೃಂಭನೆಯಿಂದ ಆಚರಿಸಿದರು, ಶುಭ ಹಾರೈಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿನಯಗೌಡಾ ಪಾಟೀಲರು ಮಾತನಾಡುತ್ತಾ ಸುಸಜ್ಜಿತ ಕಾಲೇಜ ಕಟ್ಟಡವನ್ನು ಕಟ್ಟಿದರೆ ಮಾತ್ರ ಉನ್ನತಿ ಆಗುವುದಿಲ್ಲಾ ಇದರಲ್ಲಿ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕಿಯರು ಮತ್ತು ಪ್ರಾಚಾರ್ಯರು ಎಲ್ಲರೂ ಸೇರಿ ವಿದ್ಯಾಥಿಗಳಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿದರೆ ಮತ್ತು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ರಾಜ್ಯಕ್ಕೆ ತಾವು ಮಾದರಿಯನ್ನಾಗಿ ಮಾಡಿದರೆ ತಮಗೆ ನೀವು ಕೊಡುಗೆ ಕೊಟ್ಟಂತಾಗುತ್ತದೆ