ಗೋಕಾಕ್

ಆರೋಗ್ಯ ರಕ್ಷಣೆಯಲ್ಲಿ ಓಷಧಿಕಾರರ ಪಾತ್ರ ಪ್ರಮುಖ : ತುಳಸಿಗೇರಿ

ಆರೋಗ್ಯ ರಕ್ಷಣೆಯಲ್ಲಿ ಓಷಧಿಕಾರರ ಪಾತ್ರ ಪ್ರಮುಖ : ತುಳಸಿಗೇರಿ

ಹಾರೂಗೇರಿ, 25 : ಆರೋಗ್ಯ ರಕ್ಷಣೆಯಲ್ಲಿ ಓಷಧಿಕಾರರ ಪಾತ್ರ ಪ್ರಮುಖವಾಗಿದ್ದು, ವೈದ್ಯ ಓಷಧಿಯ ಮೂಲಕ ರೋಗಿಗೆ ಜೀವ ತುಂಬಿದರೆ, ಫಾರ್ಮಾಸಿಸ್ಟ್‌ ತನ್ನ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಓಷಧಿಗೆ ಜೀವವನ್ನು ನೀಡುತ್ತಾನೆ ಎಂದು ಓಷಧ ವ್ಯಾಪಾರಿಗಳ ಸೇವಾ ಸಂಘದ ಅಧ್ಯಕ್ಷ ಬಸವರಾಜ ತುಳಸಿಗೇರಿ ಹೇಳಿದರು. 

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಓಷಧಿಕಾರರ ದಿನದ ನಿಮಿತ್ತ ಸಸಿ ನೆಡುವ ಮತ್ತು ರೋಗಿಗಳಿಗೆ ಹಣ್ಣುಹಂಪಲು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ, ನಂಬಿಕೆಗೆ ಪ್ರತೀಕವಾದ ಫಾರ್ಮಾಸಿಸ್ಟ್‌ಗಳ ಸೇವೆಗೆ ಋಣಿಯಾಗಿರಬೇಕು ಎಂದು ಹೇಳಿದರು. 

ವಿಶ್ವ ಓಷಧಿಕಾರರ ದಿನದ ಅಂಗವಾಗಿ ಪಟ್ಟಣದ 10ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ವಿವೇಕ ನಾರಗೊಂಡ, ಉಪಾಧ್ಯಕ್ಷರಾದ ಹನಮಂತ ಕುಲಗೋಡ, ರಾಮು ದರೂರ, ಷಣ್ಮುಖ ತೇರದಾಳ, ಕಾರ್ಯದರ್ಶಿ ಪರಮೇಶ ಬಾಡಗಿ, ಖಜಾಂಚಿ ಅನಿಲ ಬಾಗೇವಾಡಿ, ನಿರ್ದೇಶಕರಾದ ಸುರೇಶ ಶೇಡಬಾಳ, ಸಂತೋಷ ಸಿಂಗಾಡಿ, ದೊಡಗೌಡ ಪಾಟೀಲ, ಭರಮಪ್ಪ ಮಂಟೂರ, ಚಿದಾನಂದ ಕೊಕಟನೂರ, ಲೋಹಿತ ವಗ್ಗಾ, ರಮೇಶ ಹೊನವಾಡೆ, ಜಗದೀಶ ಪಾಟೀಲ, ರಾಜು ಪಡಲಾಳೆ, ಸಂತೋಷ ಪಾಟೀಲ ಮತ್ತಿತರರು ಉಪಸ್ತಿತರಿದ್ದರು. 


ಸುದ್ದಿ ಓದಿ