ವೃದ್ಧಾಶ್ರಮಗಳ ಹೆಚ್ಚಳ ಕಳವಳಕಾರಿ: ನಿವೃತ್ತ ಪ್ರಾಚಾರ್ಯ ಎಂ.ಪಿ.ಎಂ. ಶಾಂತವೀರಯ್ಯ

ವೃದ್ಧಾಶ್ರಮಗಳ ಹೆಚ್ಚಳ ಕಳವಳಕಾರಿ: ನಿವೃತ್ತ ಪ್ರಾಚಾರ್ಯ ಎಂ.ಪಿ.ಎಂ. ಶಾಂತವೀರಯ್ಯ  Rise in Old Age Homes a Cause for Concern: Retired Principal M.P.M. Shantaveeraiah

ವೃದ್ಧಾಶ್ರಮಗಳ ಹೆಚ್ಚಳ ಕಳವಳಕಾರಿ: ನಿವೃತ್ತ ಪ್ರಾಚಾರ್ಯ ಎಂ.ಪಿ.ಎಂ. ಶಾಂತವೀರಯ್ಯ  

ಹೂವಿನಹಡಹಲಿ 13:  ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕಾರಣಗಳಿಗಾಗಿ ಹಿರಿಯ ನಾಗರಿಕರಿಗೆ ಪ್ರೀತಿ ಹಾಗೂ ಸಹಾನುಭೂತಿ ದೊರೆಯದಿರುವುದು ವಿಷಾದನೀಯ. ಹಿರಿಯರೊಂದಿಗೆ ಪ್ರೀತಿ, ವಿಶ್ವಾಸ ಬೆಳೆಸುವ ಕಾರ್ಯವನ್ನು ಯುವಕರು ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಎಂ.ಪಿ.ಎಂ. ಶಾಂತವೀರಯ್ಯ ಹೇಳಿದರು.  

ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ದೊಡ್ಡ ಮಲ್ಲಪ್ಪ ಸೊಪ್ಪಿನ ಮೆಮೋರಿಯಲ್ ಟ್ರಸ್ಟ್‌ ಸಹಯೋಗದಲ್ಲಿ ಶನಿವಾರ ನಡೆದ ಯಜಮಾನ ಸೊಪ್ಪಿನ ದೊಡ್ಡಮಲ್ಲಪ್ಪ ಸ್ಮಾರಕ ದತ್ತಿ, ಸೊಪ್ಪಿನ ಸಿದ್ಧವೀರಮ್ಮ ಶಿವಣ್ಣ ಸ್ಮಾರಕ ದತ್ತಿ, ಸೊಪ್ಪಿನ ಪಂಪಣ್ಣ ಸ್ಮಾರಕ ದತ್ತಿ ಹಾಗೂ ಸೊಪ್ಪಿನ ಬಿ. ಅನೂಪ್ ಸ್ಮಾರಕ ದತ್ತಿ ಸ್ವೀಕಾರ ಮತ್ತು ಪುಣ್ಯಸ್ಮರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.  

ಅನಾಥ ವೃದ್ಧರಿಗೆ ವೃದ್ಧಾಶ್ರಮದಿಂದ ಅನುಕೂಲವಾಗಬಹುದು. ಆದರೆ, ಬಂಧು ಬಳಗವಿದ್ದರೂ ವೃದ್ಧರು ವೃದ್ಧಾಶ್ರಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.  

ಜಿಬಿಆರ್ ಪದವಿ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್ ಮಾತನಾಡಿ, ಜಿಬಿಆರ್ ಕಾಲೇಜಿಗೆ ಶಿಕ್ಷಣ ಪ್ರೇಮಿಗಳಿಂದ ?7 ಲಕ್ಷಕ್ಕೂ ಅಧಿಕ ಮೊತ್ತದ ದತ್ತಿ ನಿಧಿ ಸಂಗ್ರಹವಾಗಿದೆ. ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈ ದತ್ತಿಗಳು ಕಾರಣವಾಗುತ್ತಿವೆ. ಪಟ್ಟಣದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಿರ್ಮಾಣಕ್ಕೂ ದಾನಿಗಳ ಕೊಡುಗೆ ಅಪಾರವಾಗಿದೆ ಎಂದರು.  

ನಿವೃತ್ತ ಪ್ರಾಚಾರ್ಯ ಡಾ. ಕೆ. ರುದ್ರ​‍್ಪ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದತ್ತಿ ನಿಧಿ ಪ್ರೋತ್ಸಾಹಧನವಾಗಿ ಸಹಕಾರಿಯಾಗುತ್ತದೆ. ವಿವಿಧ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.  

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯೆ ಕಮಲಾ ಸೊಪ್ಪಿನ, ತತ್ವಗೀತೆ ಗಾಯಕರಾದ ಪರಮೇಶ್ವರ​‍್ಪ, ಡಾ. ಸೊಪ್ಪಿನ ಬಸಲಿಂಗಪ್ಪ, ಪಿಯು ಕಾಲೇಜು ಪ್ರಾಚಾರ್ಯ ಅಮರೇಗೌಡ ಎನ್‌. ಪಾಟೀಲ್, ವಿಜಯ ಪಂಪಣ್ಣ, ಡಿ.ಕೆ.ಎನ್‌. ಚೆನ್ನಬಸಯ್ಯ ಸೇರಿದಂತೆ ಸೊಪ್ಪಿನ ಕುಟುಂಬಸ್ಥರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ದೊಡ್ಡಮಲ್ಲಪ್ಪ ಸೊಪ್ಪಿನ ಮೆಮೋರಿಯಲ್ ಟ್ರಸ್ಟ್‌ ವತಿಯಿಂದ ಜಿಬಿಆರ್ ಕಾಲೇಜಿಗೆ ತಲಾ ?50 ಸಾವಿರದ ನಾಲ್ಕು ದತ್ತಿ ನಿಧಿಗಳನ್ನು ನೀಡಲಾಯಿತು.