ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವ
Revanasiddheshwara palanquin festival
ತಾಂಬಾ 18: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದ್ದು ಕೊಟ್ಟ ಮಾತಿಗೆ ವಿಶ್ವಾಸವಿಟ್ಟು ಕೆಲಸ ಮಾಡುವ ಹಾಲುಮತ ಸಮಾಜದ ಜನರು ಎಂದು ಗ್ರಾಮದ ಯುವನಾಯಕ ಗೋಲ್ಲಾಳಲಿಂಗನಗೌಡ ಜೋತಿಗೊಂಡ ಹೇಳಿದರು.
ಹಿರೇರೂಗಿ ಗ್ರಾಮದ ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವದಲ್ಲಿ ಅವರು ಮಾತನಾಡಿದರು. ತಮ್ಮ ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಧರ್ಮ ಪಾಲನೆ ಮಾಡುತ್ತಾ ಮತ್ತೊಬ್ಬರ ಹಣಕ್ಕೆ ಆಮಿಷಕ್ಕೊಳಗಾಗದೆ ತಮ್ಮ ತನವನ್ನು ಕೈದುಕೊಳ್ಳಬೆಕೆಂದರು.
ಪೀರ್ಪ ಜೋತಿಗೊಂಡ, ಸೈದಪ್ಪ ಜೋತಿಗೊಂಡ, ಹಣಮಂತ ಜೋತಿಗೊಂಡ ರೇವಣಸಿದ್ದ ಜೋತಿಗೊಂಡ, ಮಹಾದೇವಪ್ಪ ಜೋತಿಗೊಂಡ, ಲಕ್ಷಣ ಜೋತಿಗೊಂಡ, ಜಟ್ಟೆಪ್ಪ ಜೋತಿಗೊಂಡ ಸೇರಿದಂತೆ ಮತ್ತಿತರರು ಇದ್ದರು.
ಇದ್ದಕ್ಕೂ ಮೊದಲು ಗ್ರಾಮದಲ್ಲಿ ಪಲ್ಲಕ್ಕಿಗಳು ಡೋಳ್ಳು ಕುಣಿತದೊಂದಿಗೆ ಗ್ರಾಮದಲ್ಲಿ ಭವ್ಯ ಮೇರವಣಿಗೆಯೊಂದಿಗೆ ಗಂಗ ಸೀತಾಳ ಮುಗಿಸಿಕೊಂಡು ತನ್ನಿಹಳ್ಳಿ ಗ್ರಾಮದ ಶ್ರೀ ಜನವೇರ ಸಿದ್ದೇಶ್ವರ, ಬನ್ನಿಹಟ್ಟಿ ಗ್ರಾಮದ ಲಾಯಮ್ಮದೇವಿ, ಶ್ರೀ ಜಟ್ಟಿಂಗೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಪಲ್ಲಕ್ಕಿಗಳು ಮೂಲಸ್ಥಳಕ್ಕೆ ಆಗಮಿಸಿ ಹೂವಿನ ಹಚ್ಚಡದಲ್ಲಿ ಕುಡಿಸಲಾಯಿತ್ತು.
ರಾತ್ರಿ ಶ್ರೀ ರೇವಣಸಿದ್ದೇಶ್ವರ ಗಾಯನ ಸಂಘದ ಹಣಮಂತ ಗಿಣ್ಣೆ ಹಾಗೂ ಜೆಟ್ಟಂಗೇಶ್ವರ ಗಾಯನ ಸಂಘದ ಜಟ್ಟೆಪ್ಪ ಮಿರಗಿ ಮತ್ತು ಸಂಗೊಳ್ಳಿರಾಯಣ್ಣ ಗಾಯನ ಸಂಘದ ಯಲ್ಲಪ್ಪ ಕೇಶಗೋಳ ನಡುವೆ ಡೊಳ್ಳಿನ ಪದಗಳ ಸ್ಪರ್ಧೆ ಏರಿ್ಡಸಲಾಗಿತ್ತು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸಂಘಟಕರು ಅಚ್ಚುಕಟ್ಟಾಗಿ ಮಾಡಿದರು. ನಂತರ ಆರುತಿ ಬೆಳಗಿಸಿಕೊಂಡು ಎಲ್ಲ ಪಲ್ಲಕ್ಕಿಗಳು ತಮ್ಮ ಮೂಲಸ್ಥಾನಕ್ಕೆ ಹೋಗಲು ಬೀಳ್ಕೊಡಲಾಯಿತು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 