ಪತ್ತಾರ, ಬನಪ್ಪನವರ ಸೇವಾನಿವೃತ್ತಿ ಸಮಾರಂಭ
Retirement ceremony of Pattara, Banappa
ಪತ್ತಾರ, ಬನಪ್ಪನವರ ಸೇವಾನಿವೃತ್ತಿ ಸಮಾರಂಭ
ರಾಯಬಾಗ, 01 ; ಶಿಕ್ಷಣದ ಮಹತ್ವವನ್ನು ಅರಿತ ಅಬಾಜಿಯವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಹಾಸ್ಟೇಲ್‌ಗಳನ್ನು ತೆರೆದು ಈ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಂದೇ ಅಡಿಪಾಯ ಹಾಕಿದ್ದರು ಎಂದು ಎಸ್‌ಪಿಎಮ್ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ ಹೇಳಿದರು.
ಗುರುವಾರ ಪಟ್ಟಣದ ವಿವೇಕಾನಂದ ಕಲಾ ಮಂದಿರ ಮತ್ತು ಸಂಗೀತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಉಪನ್ಯಾಸಕ ಪಿ.ಆಯ್.ಪತ್ತಾರ ಹಾಗೂ ಸಿಪಾಯಿ ಎಸ್.ಎನ್.ಬನಪ್ಪನವರ ಸೇವಾನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷಾ ಶಿಕ್ಷಕರಗಿಂತ ಚಿತ್ರಕಲಾ ಶಿಕ್ಷಕರಿಗೆ ಹೆಚ್ಚಿನ ಸ್ಥಾನ ಮತ್ತು ಮಹತ್ವವಿದೆ. ಕಲೆ ಇಲ್ಲದ ಶಿಕ್ಷಣ ಪರಿಪೂರ್ಣ ಅನ್ನಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಅಮರಸಿಂಹ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಪಿ.ಬಿ.ಗವಾನಿ, ಹಿರಿಯ ಚಿತ್ರಕಲಾವಿದ ಡಾ.ಜಿ.ಏ.ಪತ್ತಾರ, ಹೆಸ್ಕಾಂ ಜೆಇ ಬಿ.ಎಸ್.ಮಗದುಮ್ಮ, ಚಿಕ್ಕೋಡಿ ಡಯಟ್ ಅಧಿಕಾರಿ ಭಾರತಿ ಸನದಿ, ನಿವೃತ್ತ ಪ್ರಾಚಾರ್ಯರಾದ ವಿ.ಡಿ.ಸಾಲಿ, ಎಸ್.ಆರ್.ಪೋತದಾರ, ಬಿ.ಎನ್.ಹಾದಿಮನಿ, ಆರ್.ಎ.ದೇವರುಷಿ, ಸರಸ್ವತಿ ಪತ್ತಾರ ಸೇರಿ ಅನೇಕರು ಇದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 