ನಿವೃತ್ತ ಎಎಸ್‌ಐ ಬಸವರಾಜ್ ನಿಷ್ಠೆ ಪ್ರಾಮಾಣಿಕತೆ ಎಲ್ಲರಿಗು ಮಾದರಿ: ಪಾವ್ ಗುಂಟೆಪ್ಪ

ನಿವೃತ್ತ ಎಎಸ್‌ಐ ಬಸವರಾಜ್ ನಿಷ್ಠೆ ಪ್ರಾಮಾಣಿಕತೆ ಎಲ್ಲರಿಗು ಮಾದರಿ: ಪಾವ್ ಗುಂಟೆಪ್ಪ Retired ASI Basavaraj's loyalty and honesty are an example for everyone: Pav Gunteppa

ಗಂಗಾವತಿ 08:  ಸದಾ ಕರ್ತವ್ಯದ ಬಗ್ಗೆ ತುಡಿತ ಹೊಂದಿದ್ದ ಬಸವರಾಜ್ ಗಂಗಾವತಿಯವರ ನಿಷ್ಠೆ ಪ್ರಮಾಣಿಕತೆ ಎಲ್ಲರಿಗು ಮಾದರಿ ಎಂದು ರಾಯಚೂರು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ  ಪಾವ್‌ಗುಂಟೆಪ್ಪ ಮಿರ್ಜಾಪುರ ತಿಳಿಸಿದರು. 

ಅವರು ನಿವೃತ್ತ ಎಎಸ್‌ಐ ಬಸವರಾಜ್ ಗಂಗಾವತಿ ಇವರು ಕಾರಟಗಿ ಪಟ್ಟಣದ ರಾಮನಗರದ ತಮ್ಮ ಸ್ವಗೃಹದಲ್ಲಿ  ಆಯೋಜಿಸಿದ್ದ ಸಾರ್ವಜನಿಕ ಕೃತಜ್ಞತಾ ಸಮರಾ​‍್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು, ಸಾರ್ವಜನಿಕರು ಅತ್ಯಂತ ಜಾಗರೂಕತೆ ಹೊಂದಿರುವ ಇಂಥ ಕಾಲಘಟ್ಟದಲ್ಲಿ ಕೆಮೆರಾ ಹಾವಳಿ ಜಾಲತಾಣಗಳ ಬಳಕೆಯ ಮೂಲಕ ಕಾಲೆಳೆಯುವ ಕೆಲ ಕಿಡಿಗೇಡಿಗಳ ನಡುವೆ ಅತ್ಯಂತ ಸಾಧುಸ್ವಭಾವದ ಬಸವರಾಜ್ ಅವರು, ವೃತ್ತಿ ಜೀವದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ, ಯಾವುದೇ ವಿವಾದಕ್ಕೆ ಒಳಗಾಗದೆ ತಮ್ಮ ಕಾರ್ಯದಕ್ಷತೆಯಿಂದ ಎಲ್ಲರ ಮನಗೆದ್ದು 33 ವರ್ಷಗಳ ವೃತ್ತಿ ಜೀವನ ಪೂರೈಸಿರುವುದು ಚಿಕ್ಕ ಸಾಧನೆಯಲ್ಲ ಎಂದು ಗುಣಗಾನ ಮಾಡಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಹಾಸುಹೊದ್ದುಕೊಳ್ಳುವ ಬಡತನದ ನಡುವೆ, ಎಲ್ಲರ ಪ್ರೀತಿ ಸಂಪಾದಿಸುತ್ತಾ ಓದಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಲ್ಲದೆ ಕುಟುಂಬಕ್ಕೂ ಪ್ರೀತಿಪಾತ್ರರಾಗಿ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುತ್ತಾ ಸಮಾಜಕ್ಕೆ ಕೃತಜ್ಞತೆ ಅರ​‍್ಿಸುತ್ತಿರುವುದು ಅನುಕರಣೀಯ ಎಂದು ಪ್ರಶಂಸೆವ್ಯಕ್ತಪಡಿಸಿದರು.  

ನಿವೃತ್ತ ಎಎಸ್‌ಐ ಬಸವರಾಜ್ ಗಂಗಾವತಿ ಹಾಗು ದೀಪಮ್ಮ ಬಸವರಾಜ್ ಗಂಗಾವತಿ ಇವರಿಗೆ ಅಪಾರ ಸಂಖ್ಯೆಯ ಜನತೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದುದ್ದಕ್ಕು ಪಂಪಾಪತಿ ಇಂಗಳಗಿ ಮತ್ತು ವಿಐಪಿ ಮೆಲೋಡಿಸ್ ತಂಡ ಅತ್ಯುತ್ತಮ ಮನೋರಂಜನೆ ನೀಡಿತು. ವೇದಿಕೆಯಲ್ಲಿ ತನಗೆ ಬಾಲ್ಯದಿಂದಲೂ ಶಿಕ್ಷಣಕ್ಕೆ ನೆರವಾದ ವಿಜಯಲಕ್ಷ್ಮಿ ವೀರಭದ್ರ​‍್ಪ ಹೊಮ್ಮಿನಾಳ ಮತ್ತು ಪಾಲನೆ ಪೋಷಣೆ ಮಾಡಿದ ತಾಯಿ ನಿಂಗಮ್ಮ ಉಪ್ಪಾರ್ ಇವರನ್ನು  ಬಸವರಾಜ್ ದಂಪತಿಗಳು ಮೊದಲು ಆತ್ಮೀಯವಾಗಿ ಸನ್ಮಾನಿಸಿ ಗೌರಿಸಿದರು 

ಈ ಸಂದರ್ಭದಲ್ಲಿ ಮುಖಂಡರಾದ ಕಾರಟಗಿ ಪಿಐ ಸುದೀರ್ ಕುಮಾರ್ ಬೆಂಕಿ, ಕುರುಕುಂದಿ ಹನುಮಂತಪ್ಪ ಸಿಂಧನೂರು, ವಿಐಪಿ ಮೆಲೋಡಿಸ್ ಪಂಪಾಪತಿ ಇಂಗಳಗಿ, ಉಪ್ಪಾರ ಸಮಾಜದ ನೌಕರರ ಸಂಘದ ಅಧ್ಯಕ್ಷ ದೇವಪ್ಪ ಮೇಷ್ಟ್ರು, ಮುಖಂಡರಾದ ಛತ್ರ​‍್ಪ ಕುರುಕುಂದಿ, ಅಯ್ಯಪ್ಪ ಕಾರಟಗಿ, ಪ್ರಕಾಶ್ ಮಿರ್ಜಾಪುರ, ಗ್ಯಾನಪ್ಪ ಶಿವಪುರ, ಕಲ್ಗುಡಿ ಹನುಮಂತಪ್ಪ ಬಂಡೆ, ಹಿರೇಜಂತಕಲ್ ಶರಣಪ್ಪ ಉಪ್ಪಾರ, ಬಸವರಾಜ್ ಊದಲ್, ಕನಕಪ್ಪ ಚನ್ನಳ್ಳಿ ಇತರರಿದ್ದರು.