ಕಾಡದೇವರವರಿಗೆ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಮನವಿ

ರಬಕವಿ-ಬನಹಟ್ಟಿ 22: ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, ಪಕ್ಷದ ಸಂಘಟನೆಗಾಗಿ ಶ್ರಮಿಸಿರುವ ಬನಹಟ್ಟಿ ನಗರದ ದುಂಡಯ್ಯ ಬಸಯ್ಯ ಕಾಡದೇವರವರಿಗೆ  ರಬಕವಿ-ಬನಹಟ್ಟಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಕೆ.ಎಚ್‌.ಡಿ.ಸಿ. ನಿಗಮದ ಅಧ್ಯಕ್ಷ ಹಾಗೂ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಕಾಡದೇವರ ಅಭಿಮಾನಿಗಳು ಮನವಿ ಸಲ್ಲಿಸಿದರು. 

ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ದುಡಿದಿರುವ ಕಾಡದೇವರ ಯಾವುದೇ ಫಲಾಪೇಕ್ಷೆಯಿಲ್ಲದೆ ಪಕ್ಷ ನಿಷ್ಟರಾಗಿದ್ದಾರೆ. 20 ವರ್ಷಗಳಿಂದ ಪಕ್ಷದ ಏಳಗೆಗಾಗಿ ದುಡಿದಿರುವ ಹಿರಿಯ ಕಾರ್ಯಕರ್ತನನ್ನು ಈ ಬಾರಿ ಶಾಸಕರು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಬೇಕೆಂದು ವಿರುಪಾಕ್ಷಯ್ಯ ಮಠದ ಶಾಸಕರಲ್ಲಿ ವಿನಂತಿಸಿದರು. 

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸಿದ್ದು ಸವದಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಉನ್ನತವಾದ ಸ್ಥಾನ ನೀಡಿದ ವಿಶ್ವದ ಏಕೈಕ ಪಕ್ಷವಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡಲಾಗುವುದು ಎಂದರು. 

ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಬಿಜೆಪಿ ನಗರಾಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ನಗರಸಭೆ ಸದಸ್ಯೆ ಶ್ರೀಮತಿ ಜಯಶ್ರೀ ಬಾಗೇವಾಡಿ, ಪ್ರವೀಣ ಧಬಾಡಿ, ತಮ್ಮಾಣ್ಣಿ ಅಬಕಾರ, ಗಂಗಯ್ಯ ಹಿರೇಮಠ, ಈಶ್ವರ ಕಾಡದೇವರ, ವೀರಭದ್ರಯ್ಯ ಕತ್ತಿ, ಈರಯ್ಯಾ ಕಾಡದೇವರ, ಶೇಖರ ಮುಗತಿ, ಶಿವಾನಂದ ಬಾಣಕಾರ, ಮಹಾದೇವ ಚನಾಳ, ಶಂಕರ ಅಂಗಡಿ, ಈಶ್ವರ ಪೂಜಾರಿ, ವೀರಭದ್ರ ಶಾಸ್ತ್ರಿ, ಬಾಳಯ್ಯ ಪೂಜಾರಿ, ಮಲ್ಲು ಬೀಳಗಿ, ಮಲ್ಲಪ್ಪ ಫಕೀರಪೂರ, ಮಹಾಂತೇಶ ಕಾಡದೇವರ ಸೇರಿದಂತೆ ಅನೇಕರಿದ್ದರು.