ಮಲಾಬಾದ ಸಹಕಾರಿ ಸಂಘದ ಕಟ್ಟಡ ನಿರ್ಮಿಸಲು ಉತಾರನಲ್ಲಿ ಹೆಸರು ಸೇರೆ​‍್ಡಗೆ ಮನವಿ

ಮಲಾಬಾದ ಸಹಕಾರಿ ಸಂಘದ ಕಟ್ಟಡ ನಿರ್ಮಿಸಲು ಉತಾರನಲ್ಲಿ ಹೆಸರು ಸೇರೆ​‍್ಡಗೆ ಮನವಿ Request to include name in the Record of Rights for the construction of the Malabad Cooperative Soci


ಅಥಣಿ 18: ಮಲಾಬಾದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ನಿರ್ಮಿಸಲು ಸಂಘದ ಹೆಸರಿನಲ್ಲಿ ಉತಾರ ಮಾಡಿಕೊಡಬೇಕು ಎಂದು ಸಂಘದ ಅಧ್ಯಕ್ಷ ಶಿವಾನಂದ ಕುಳ್ಳೊಳ್ಳಿ ಮಲಾಬಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಗಳನ್ನು ಆಗ್ರಹಿಸಿದರು. ಅವರು ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ 1937 ರಲ್ಲಿ ಪ್ರಾರಂಭಗೊಂಡ ಈ ಸಹಕಾರಿ ಸಂಘಕ್ಕೆ ಆರ್ಥಿಕ ವ್ಯವಹಾರ ನಡೆಸಲು ಸುಸಜ್ಜಿತ ಕಟ್ಟಡ ಇಲ್ಲ ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೂತನ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ ಇದಕ್ಕಾಗಿಯೇ 30 ವರ್ಷಗಳಿಂದ ಸದ್ಯ ಕಾರ್ಯನಿರ್ವಹಿಸುತ್ತಿರುವ ಸ್ಥಳದ ಉತಾರನಲ್ಲಿ  ನಮ್ಮ ಸಂಘದ ಹೆಸರು ಸೇರೆ​‍್ಡಗೊಳಿಸಿ ಉತಾರ ಕೊಡಬೇಕು ಎಂದ ಅವರು ಪ್ರಸಕ್ತ ಸಾಲಿನಲ್ಲಿ ಸಹಕಾರಿ ಸಂಘದ ಸದಸ್ಯರಿಗೆ ಶೇ.9 ರಷ್ಟು ಲಾಭಾಂಶ ವಿತರಿಸಲಿದೆ ಎಂದು ಘೋಷಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀಶೈಲ ಮಶಾಳೆ ಸರ್ವಸದಸ್ಯರನ್ನು ಸ್ವಾಗತಿಸಿಕೊಂಡು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಘ ಸದಸ್ಯರ ಸಹಕಾರದಿಂದ 17 ಲಕ್ಷ 15 ಸಾವಿರ ರೂಪಾಯಿಗಳಷ್ಟು ಲಾಭ ಗಳಿಸಿದೆ ಎಂದ ಅವರು ಸಾಲ ಪಡೆದುಕೊಂಡ ಸದಸ್ಯರು ನಿಗದಿತ ಅವಧಿಯಲ್ಲಿಯೇ ಸಾಲ ಮರುಪಾವತಿಸಬೇಕು ಎಂದು ಮನವಿ ಮಾಡಿದರು.ಸಂಘದ ವರದಿ ಓದಿದ ಅಕೌಂಟಂಟ್ ರಾಮಣ್ಣಾ ಜೈನಾಪುರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೂನ್ಯ ಬಡ್ಡಿ ದರದಲ್ಲಿ 5 ಕೋಟಿ 29 ಲಕ್ಷ 30 ಸಾವಿರ ರೂಗಳಷ್ಟು 933 ಸದಸ್ಯರಿಗೆ ಸಾಲ ಹಂಚಿಕೆ ಮಾಡಿದ್ದು, ಒಟ್ಟು 12 ಕೋಟಿ 74 ಲಕ್ಷ 22 ಸಾವಿರ ರೂ.ಗಳಷ್ಟು ಆರ್ಥಿಕ ವ್ಯವಹಾರ ನಡೆಸಿದೆ.

ಎಂದ ಅವರು ಒಟ್ಟು 1538 ಸದಸ್ಯರಿಂದ 1ಕೋಟಿ 13 ಲಕ್ಷ 83 ಸಾವಿರ ರೂ. ಗಳಷ್ಟು ಶೇರು ಬಂಡವಾಳ ಸಂಗ್ರಹಿಸಿದೆ ಎಂದರು.   ಸಂಘದ ಉಪಾಧ್ಯಕ್ಷ ಅಪ್ಪಾಸಾಬ ಸನದಿ , ಸದಸ್ಯರಾದ ಮಹಾದೇವ ಕುಳ್ಳೊಳ್ಳಿ, ಪ್ರಭಾಕರ ಪಾಟೀಲ , ಶ್ರೀಶೈಲ ಖೋತ , ಮುರುಗೆಪ್ಪಾ ಗುಂಜಿಗಾವಿ, ಅಶೋಕ ಚೌಗಲಾ, ಸತ್ಯಪ್ಪಾ ಮಾಳಿ, ಅಶೋಕ ಪಾಟೀಲ ,  ಶ್ರೀಮತಿ ಮಹಾದೇವಿ ಕುಳ್ಳೊಳ್ಳಿ, ಶ್ರೀಮತಿ ಶಾಂತಾಬಾಯಿ ಮಾನೆ, ಶ್ರೀಮತಿ ಶಾಂತಾಬಾಯಿ ಹೊನಕಾಂಡೆ, ಬ್ಯಾಂಕ್ ಪ್ರತಿನಿದಿ ರಮೇಶ ಗಲಗಲಿ, ಕ್ಲಾರ್ಕ್‌ ಸೋಮಲಿಂಗಯ್ಯಾ ಮಠಪತಿ, ಸಿಪಾಯಿ ಮುರಿಗೇಪ್ಪಾ ಮಾನೆ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.