ಸ್ಥಳಿಯರಿಗೆ ಬಿದಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೆಂದು ಮನವಿ

Request to allow locals to run bamboo business

ಸ್ಥಳಿಯರಿಗೆ ಬಿದಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೆಂದು ಮನವಿ 

ಗದಗ 14: ನಗರದ ತೋಂಟದಾರ್ಯ ಜಾತ್ರಾ ಕಮಿಟಿ ವತಿಯಿಂದ ಪ್ರತಿ ವರ್ಷವು ರಸ್ತೆ ಪಕ್ಕದಲ್ಲಿ ಬಿದಿ ಬದಿ ವ್ಯಾಪಾರ ನಡೆಸುವ ಅನ್ಯ ರಾಜ್ಯದ ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ನಡೆಸುವುದರಿಂದ ಗದಗ ನಗರದ ಬಿದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ಆಗುವುದನ್ನ  ನಾವು ನಿರಂತರವಾಗಿ ಸುಮಾರು 2016 ನೇ ಸಾಲಿನಿಂದಲೂ ಮಠದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದ್ದು, ಸುಮಾರು 80 ಎಕರೆ ಜಮೀನು ನಮ್ಮದು ಅಂತಾ ತಿಳಿಸಿದ್ದು, ನಿನ್ನೆಯ ದಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆ ನಮಗೆ ತೃಪ್ತಿ ತಂದಿಲ್ಲ ಎಂದು ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವರು ಪ್ರತಿನಿತ್ಯ 15-20 ಜನ ಪೌರ ಕಾರ್ಮಿಕರು ಮಠದ ಮುಂದಿನ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಾರೆ. ಈ ಸ್ಥಳವನ್ನ ಮಠದ ಆಡಳಿತ ಮಂಡಳಿ ನಮ್ಮದು ಅಂತಾ ಹೇಳುತ್ತಾರೆ. ಈ ರೀತಿಯ ಹೇಳಿಕೆ ಸಂವಿಧಾನ ಮತ್ತು ಅಂಬೇಡ್ಕರ್ ರವರಿಗೆ ಅವಮಾನ ಮಾಡಿದಂತೆ, ಪ್ರತಿನಿತ್ಯ ದುಡಿದು ತಿನ್ನುವ ಜನ ಇಲ್ಲಿ ಸಣ್ಣ ಪುಟ್ಟ ಅಂಗಡಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿವೆ. ವಿಶೇಷವಾಗಿ ಎಸ್ ಎಸ್ ಕೆ ಸಮಾಜ ಬಿದಿಬದಿ ವ್ಯಾಪಾರ ಮಾಡುತ್ತವೆ ಅವರಿಗೆಲ್ಲ ತೊಂದರೆ ಆಗಿದೆ ಹಾಗೂ  ಪ್ರತಿನಿತ್ಯ ಸಾರ್ವಜನಿಕರ ಓಡಾಟಕ್ಕೆ ಈ ಸ್ಥಳದಲ್ಲಿ ತೊಂದರೆ ಆಗುತ್ತಿದ್ದು, ತೋಂಟದಾರ್ಯ ಆಡಳಿತ ಮಂಡಳಿ ಅಲ್ಲ ಅದು ತೋಂಟದಾರ್ಯ ಟ್ರೇಡಿಂಗ್ ಕಂಪನಿ ಎಂದು ಆರೋಪಿಸಿದರು.  

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮುಂದೆ ತೋಂಟದಾರ್ಯ ಮಠದ ಸ್ಥಳದ ಬಗ್ಗೆ ಅಧಿಕವಾದ ಸುಳ್ಳು ಹೇಳಿದ್ದು, ಅದನ್ನ ಆಡಳಿತ ಮಂಡಳಿ ಸ್ಪಷ್ಟ ಪಡಿಸಬೇಕಿದೆ. ಸಾವಿರಾರು ಜನ ಬಿದಿಬದಿ ವ್ಯಾಪಾರಸ್ಥರ ಧ್ವನಿಯಾಗಿ  ನಾವು ಬಂದಿದ್ದು, ನಾವು ಕೂಡಾ ಮಠದ ಭಕ್ತರೇ ಎಂದ ರಾಜು ಖಾನಪ್ಪನವರ ಈಗ ಮಠವು ವ್ಯಾಪಾರೀಕರಣಕ್ಕೆ ನಿಂತಿದೆ. ಮಠದ ಭಕ್ತರು ಅಂತಾ ಹೇಳಿಕೊಂಡು ಮಠದ ಆಡಳಿತ ಮಂಡಳಿಯ ಲೇಟರ್ ಪ್ಯಾಡ್ ಮುಖಾಂತರ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ತೋಂಟದಾರ್ಯ ಮಠ  ಜಿಲ್ಲಾಡಳಿತ ಮತ್ತು ನಗರಸಭೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ.ನಾವು ಈ ಹೋರಾಟ ನಿಲ್ಲಿಸಿಲ್ಲ ತಾತ್ಕಾಲಿಕ ವಿರಾಮ ಅಷ್ಟೇ, ತೋಂಟದಾರ್ಯ ಮಠವು ಗದಗ-ಬೆಟಗೇರಿ ನಗರಸಭೆಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ ಎಂದು ರಾಜು ಖಾನಪ್ಪನವರ ಆರೋಪಿಸಿದರು. ಪತ್ರಿಕಾ ಗೋಷ್ಠಿ ವೇಳೆ ಶ್ರೀರಾಮ ಸೇನಾ ಗದಗ ಜಿಲ್ಲಾಧ್ಯಕ್ಷ ಸೋಮು ಗುಡಿ, ಶ್ರೀರಾಮ ಸೇನಾ ಗದಗ ತಾಲೂಕ ಅಧ್ಯಕ್ಷ ಭರತ್ ಲದ್ದಿ, ದಲಿತ ಮಿತ್ರ ಮೇಳ ಗದಗ ಜಿಲ್ಲಾಧ್ಯಕ್ಷ ಕುಮಾರ ನಡಗೇರಿ, ಮೌನೇಶ ದಾಸರ, ವಿಶ್ವನಾಥ ಸಿರಿ, ವೀರಣ್ಣ ಹೆಬಸೂರ, ಮಹೇಶ ರೋಖಡೆ, ಮಂಜು ಬಂಡಿವಡ್ಡರ, ಸತೀಶ ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.