ಸಹಕಾರಿ ಸಂಘಕ್ಕೆ ಜಾಗ ನೀಡುವಂತೆ ಮನವಿ

ಸಹಕಾರಿ ಸಂಘಕ್ಕೆ ಜಾಗ ನೀಡುವಂತೆ ಮನವಿ  Request to allot land to the cooperative society

ಸಂಬರಗಿ 19: ಮಲಾಬಾದ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಿವಿಧ ಉದ್ದೇಶಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಾಗ ಒದಗಿಸಬೇಕು ಎಂದು ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಹಕಾರಿ ಸಂಘವು ಪ್ರಸ್ತುತ ಸಣ್ಣ ಪ್ರಮಾಣದ ಜಾಗ ಹೊಂದಿದ್ದು, ಕಟ್ಟಡ ನಿರ್ಮಿಸಲು ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಸಂಘದ ಮುಂಭಾಗದಲ್ಲಿರುವ ಜಾಗವನ್ನು ನೋಂದಾಯಿಸಿ ಸಂಘಕ್ಕೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.  

ಈ ಕುರಿತು ಪಿಡಿಒ ವಿದ್ಯಾ ಸೂರ್ಯವಂಶಿ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಕುಳೇಲಿ, ಚಿದಾನಂದ ಚೌಗುಲೆ, ಅಶೋಕ ಘಟಾನಟ್ಟಿ, ರಾಮ್ ಜನಾಪುರ, ಶ್ರೀಶೈಲ ಖೋತ, ಶಾಂತಾಬಾಯಿ ಮಾನೆ, ಶಾಂತಾಬಾಯಿ ಹೊನನಖಂಡೆ, ಮುರ್ಗಪ್ಪ, ಗುಂಜಿಗಾವಿ, ಶ್ರೀಶೈಲ ಮಾಶಲೆ, ರಾಮಣ್ಣ ಜೈನಾಪುರ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  ಮಲಾಬಾದ ಗ್ರಾಮಸ್ಥರ ಪರವಾಗಿ ಪಿಕೆಪಿಎಸ್ ಸಹಕಾರಿ ಸಂಘಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸುವಂತೆ ಪಿಡಿಒ ಅವರಿಗೆ ಮನವಿ ಸಲ್ಲಿಸಲಾಯಿತು.