ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಮನವಿ

ಇಂಡಿ: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ. ರಾಮನ್ ಕಾಲೇಜಿನ ಮುಂಭಾಗದಲ್ಲಿ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಇಂಡಿ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. 

ಅಲ್ಲಿ ಬಸ್ ನಿಲುಗಡೆಗೆ ಆದೇಶವಿದ್ದರೂ ಸಹ ಆ ರಸ್ತೆಯ ಮುಖಾಂತರ ಹೋಗುವ ಮಕ್ಕಳಿಗೆ ಅನಾನುಕೂಲವಾಗುವುದರಿಂದ ಬಸ್ ನಿಲುಗಡೆ ಇದ್ದರೂ ಬಸ್ ನಿಲುಗಡೆ ಮಾಡುವಲ್ಲಿ ಚಾಲಕರು, ನಿರ್ವಾಹಕರು ಹಿಂಜರಿಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಎರಡು ಕಿ. ಮೀ ವರೆಗೆ ನಡೆಯುತ್ತಲೇ ಹೋಗಬೇಕಾಗಿದೆ. ಆಲಮೇಲ ಮಾರ್ಗವಾಗಿ ಹೋಗುವ ಎಲ್ಲ ಬಸ್ಗಳನ್ನು ಸಿ.ವಿ. ರಾಮನ್ ಕಾಲೇಜು ಮುಂಭಾಗ ನಿಲುಗಡೆಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ರಾಧಿಕಾ ಗಂಗಣ್ಣವರ, ಅನಸೂಯಾ ಬರಡೋಲ, ಶಕ್ತಿಪ್ರಸಾದ ಹಣಮಶೆಟ್ಟಿ, ಸಂಜೀವಕುಮಾರ ಜೋಶಿ, ಅಭಿಶೇಕ ಬೀಳಗಿ, ಶಾಂತಿಕುಮಾರ ಖಾನಾಪುರ, ಜಮೀರ ತಮಟಗಾರ, ಚಿನ್ಮಯ ಧನಪಾಲ, ಕಾತೀಕ ಮಹೇಂದ್ರಕರ್ ಸೇರಿದಂತೆ ಮತ್ತಿತರರು ಇದ್ದರು.  ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಇಂಡಿ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರಿಗೆ ಮನವಿ ಸಲ್ಲಿಸಿದರು.