ವೀರಶೈವ ಧರ್ಮದ ಉತ್ತೇಜನಕ್ಕಾಗಿ ರೇಣುಕಾಚಾರ್ಯರು ಅವತರಿಸಿದ್ದಾರೆ - ವೀರಯ್ಯ ಮಠಪತಿ
Renukacharya incarnated to promote Veerashaiva religion - Veeraiah Mathapati
ಶಿರಹಟ್ಟಿ 01 : ವೀರಶೈವ ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ವೀರಶೈವ ಧರ್ಮದ ಉತ್ತೇಜನಕ್ಕಾಗಿ ರೇಣುಕಾಚಾರ್ಯರು ಅವತರಿಸಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವೀರಯ್ಯ ಮಠಪತಿ ಅವರು ಹೇಳಿದರು. ಅವರು ರವಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂತರ ತಹಶೀಲ್ದಾರ್ ರಾಘವೇಂದ್ರ ರಾವು ಅವರು ಮಾತನಾಡುತ್ತಾ, ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ನಾವು ಅಳವಡಿಕೊಂಡು ನಮ್ಮ ಮಕ್ಕಳಿಗೆ ಉತ್ತಮ ಸಂಪ್ರದಾಯ, ಸಂಸ್ಕಾರ ನೀಡಿ ಬೆಳೆಸಬೇಕಿದೆ, ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖಂಡರಾದ ಎಂ ಕೆ ಲಮಾಣಿ, ಬಾಬಾಜಾನ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 