ಕಾಗವಾಡ ತಾಲ್ಲೂಕಿನ ಉಗಾರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ
Religious program in Ugar, Kagwad Taluk, to mark the month of Shravana
ಲೋಕದರ್ಶನ ವರದಿ
ಕಾಗವಾಡ, ಆ. 23: ಕಾಗವಾಡ ತಾಲ್ಲೂಕಿನ ಉಗಾರ ಗ್ರಾಮದ ಬುದ್ರಕ್ನಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶನಿವಾರ (ಆ. 22) ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾಗವಾಡ ತಾಲ್ಲೂಕು ಸಮಾಜದ ಅಧ್ಯಕ್ಷ ಸುರೇಶ ಕೋಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಣ್ಯಸ್ಮರಣೆ, ಗುರು ವಂದನೆ, ವಿವಿಧ ಸ್ವಾಮೀಜಿಗಳ ಸನ್ಮಾನ, ಭಜನೆ, ಕೀರ್ತನೆ ಹಾಗೂ ಅನ್ನಸಂತರೆ್ಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಕೋಳಿ, “ಶ್ರಾವಣ ಮಾಸವು ಪವಿತ್ರ ಮಾಸವಾಗಿದ್ದು, ಪ್ರತಿವರ್ಷ ಶ್ರಾವಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ವರ್ಷವೂ ವಿವಿಧ ಸ್ವಾಮೀಜಿಗಳನ್ನು ಸನ್ಮಾನಿಸಿ, ಗುರು ವಂದನೆ, ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಭಕ್ತಿಭಾವ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಸಮಾಜದ ಬಾಂಧವರು ಹಾಗೂ ಗ್ರಾಮಸ್ಥರು ಉತ್ತಮ ಸಹಕಾರ ನೀಡುತ್ತಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ಅಥಣಿಯ ಪೂಜ್ಯ ಡಾ. ಕಾಡಯ್ಯ ಸ್ವಾಮೀಜಿ, ಹಾವೇರಿಯ ಪೂಜ್ಯ ಪ್ರಕಾಶ ಸ್ವಾಮೀಜಿ, ಮೋಳೆ ಗ್ರಾಮದ ಡಿ.ಎಸ್. ಚಾಳೇಕರ ಗುರುಗಳು, ಇಂಗಳಿಯ ಜ್ಞಾನೋಭಾವ ಮಹಾರಾಜರು, ಉದಗಟ್ಟಿಯ ಪೂಜ್ಯ ಪದ್ಮರಾಜ ಸ್ವಾಮೀಜಿ, ಉಗಾರದ ಪೂಜ್ಯ ಗೌರಿಶ ಸ್ವಾಮೀಜಿ, ಮೊಳವಾಡದ ಸುಭಾಷ ಶೇವಾಳೆ ಮಹಾರಾಜರು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಮುಖ್ಯಂಡರಾದ ರಾಹುಲ್ ಶಹಾ, ವಿಫುಲ್ ಪಾಟೀಲ, ರಾಯಪ್ಪ ಕೋಳಿ, ಸೈದು ಹೆಗಡೆ, ವಿಠ್ಠಲ ಗಸ್ತಿ, ಪದ್ಮಣ್ಣ ಕೋಳಿ, ಸುಕುಮಾರ ಕಾಂಬಳೆ, ಉತ್ತಮ ಕೋಳಿ, ಅಪ್ಪಾಸಾಬ ಸನದಿ, ಮಾರುತಿ ಸನದಿ, ಭಗವಂತ ತಳವಾರ, ಅಶೋಕ ಕೋಳಿ, ಶೈಲಶ್ರೀ ಕೋಳಿ, ಭರಮಾ ಕೋಳಿ, ಗಾಯತ್ರಿ ಕುಂಬಾರ, ರಾಮಾ ಅವಧೂತ, ಅಮೀನ ಶೇಖ್, ಕಿತ್ತೂರು ಮೇಡಂ, ಸಾವಂತ ಮಾಸ್ತರ, ಮಲ್ಲು ಪಲ್ಲಕ್ಕಿ, ಶೇಖರ ಜಮಖಂಡಿ, ಶ್ರೀಕಾಂತ ಹಡಪದ ಸೇರಿದಂತೆ ಬಸವೇಶ್ವರ ಭಜನಾ ಮಂಡಳಿ, ಅಂಬಾಬಾಯಿ ಭಜನಾ ಮಂಡಳಿಗಳ ಸದಸ್ಯರು ಹಾಗೂ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 