ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಅಂಗವಾಗಿ ಧರ್ಮ ಜಾಗೃತಿ ಕಾರ್ಯಕ್ರಮ
Religious awareness program as part of the Vishali Yatra Mahotsav of Veerabhadra Devara
ಮಾಂಜರಿ, 19 : ಭಾರತಕ್ಕೆ ಎಲ್ಲಿಯವರೆಗೂ ಧರ್ಮದ ಮಾರ್ಗದರ್ಶನ ದೊರೆಯುತ್ತದೆಯೋ ಅಲ್ಲಿಯವರೆಗೂ ದೇಶವು ವಿಶ್ವಗುರುವಾಗಿ ಉಳಿಯಲಿದೆ. ಇಂತಹ ಅದ್ಯಾತ್ಮಿಕ ಜ್ಞಾನವನ್ನು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ' ಎಂದು ಮಾಜಿ ಸಚಿವ ಹಾಗೂ ನಿಪ್ಪಾಣಿ ಶಾಸಕಿ ಜೊಲ್ಲೆ ಹೇಳಿದರು
ಅವರು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಅಂಗವಾಗಿ ಯೋಜಿಸಲಾದ ಧರ್ಮ ಜಾಗೃತಿ, ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರುಗಳಾದ ಚೆನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ವಹಿಸಿದ್ದರು.
ಅತಿಥಿಯಾಗಿ ಮಾಜಿ ಸಂಸದ ಅಣ್ಣ ಸಾಹೇಬ್ ಜೊಲ್ಲೆ ಅಜಯ್ ಸೂರ್ಯವಂಶಿ ಅಜಿತ್ ರಾವ್ ದೇಸಾಯಿ ಜಮಖಂಡಿ ಶಾಸಕ ಜಗದೀಶ್ ಗುಡುಗುಂಟಿ ಗುರು ಬಾಬಾ ಮಹಾರಾಜ್ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಶರಣಬಸವ ಶಿವಾಚಾರ್ಯ ಸ್ವಾಮೀಜಿ ಗುರು ಶಾಂತಲಿಂಗ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಸವರಾಜ್ ಸ್ವಾಮೀಜಿ ವೀರಭದ್ರ ದೇವರ ಉತ್ತರಾಧಿಕಾರಿಗಳಾದ ರೇಣುಕಾದೇವರು ಹಾಜರಿದ್ದರು.
ಇಡೀ ವಿಶ್ವಕ್ಕೆ ಧರ್ಮವು ಚಾಲಕನಂತಿದೆ. ಆ ತತ್ತ್ವದ ಆಧಾರದ ಮೇಲೆಯೇ ಎಲ್ಲವೂ ಸಾಗುತ್ತಿದೆ. ಭಾರತವನ್ನು ಈ ಧರ್ಮ ಮುನ್ನಡೆಸುವವರೆಗೂ ವಿಶ್ವಗುರುವಾಗಿ ಉಳಿಯಲಿದೆ. ಅಧ್ಯಾತ್ಮವು ಪೂರ್ವಿಕರಿಂದ ನಮಗೆ ಬಂದಿರುವ ಪರಂಪರೆಯಾಗಿದೆ. ವಿಶ್ವಕ್ಕೆ ಅಧ್ಯಾತ್ಮದ ಕೊರತೆ ಇದೆ ಕ್ಕಾಗಿ ಪ್ರಾಚೀನ ಕಾಲದಿಂದ ನಡೆದ ಬಂದಿರುವ ಯಾತ್ರಾ ಮಹೋತ್ಸವ ದಲ್ಲಿ ಭಾಗವಹಿಸಿ ಹಾಗೂ ಸಾಧು-ಸಂತರ ಮಹಾತ್ಮರ ಮತ್ತು ಪಂಚಪೀಠಾಧೀಶಗಳ ಉಪದೇಶವನ್ನು ಪಾಲಿಸಿ' ಅಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆ ಮಾಡಬೇಕೆಂದು ಎಂದು ಕಾರ್ಯಕ್ರಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಹೇಳಿದರು.
'ಧರ್ಮವು ಧಾರ್ಮಿಕತೆಯ ಮಿತಿಯೊಳಗಿಲ್ಲ. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮೂಲ ಕರ್ತವ್ಯ ಮತ್ತು ಶಿಸ್ತು ಇದೆ. ಒಂದು ದೇಶ ಜಾತ್ಯತೀತ ಇರಬಹುದು. ಆದರೆ ಯಾವುದೇ ಮಾನವ ಅಥವಾ ಸೃಷ್ಟಿಯು ಧರ್ಮದ ಹೊರತಾಗಿಲ್ಲ' ಎಂದು ಶ್ರೀಶೈಲ ಪೀಠದ ಜಗದ್ಗುರುವಾದ ಡಾ. ಚೆನ್ನ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು
ಈ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾಜಿ ಸಂಸದ ಅನ್ನ ಸಾಹೇಬ್ ಜೊಲ್ಲೆ ಶಾಸಕ ಜಗದೀಶ್ ಗುಡುಗುಂಟಿ ಹಾಗೂ ಉಪಸ್ಥಿತಿ ಎಲ್ಲ ಸ್ವಾಮೀಜಿಗಳ ಶ್ರೀ ವೀರಭದ್ರ ದೇವರ ದಿನದರ್ಶಿಕೆಯನ್ನು ಪ್ರಕಟಣೆ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಹಲವಾರು ಭಕ್ತರು ಪಾಲ್ಗೊಂಡಿದ್ದರು ಮಲ್ಲಪ್ಪ ಸಿಂಧೂರ್ ಸ್ವಾಗತಿಸಿ ಸುಬ್ರಾವ್ ಎಂಟೆತ್ತಿನವರ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 