ರವೀಂದ್ರ ಶೆಟ್ಟಿ ಪುಣ್ಯಸ್ಮರಣೆ: ರಕ್ತದಾನ, ಕಣ್ಣಿನ ತಪಾಸಣೆ ಶಿಬಿರ

ಹುಕ್ಕೇರಿ 31: ನಾವೂ ಮಾಡುವ ಕಾರ್ಯಗಳು ಜನಮಾನಸದಲ್ಲಿ ತಲೆಮಾರಿನ ನಂತರ ನಿರಂತರವಾಗಿ ಜನರಿಗೆ ಮುಟ್ಟುವಂತಿರಬೇಕು ಎಂದು ಘೋಡಗೇರಿಯ ಮಲ್ಲಯ್ಯಾ  ಮಹಾಸ್ವಾಮಿಗಳು ಹೇಳಿದರು.  

ಅವರು ಪಟ್ಟಣದ ಶಿಕ್ಷಣ ಪ್ರೇಮಿ,  ರವೀಂದ್ರ ಶೆಟ್ಟಿ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತ ಎಸ್‌ಕೆ ಹೈಸ್ಕೂಲ್‌ನ ಚಿಣ್ಣರ ಭವನದಲ್ಲಿ ಸಿ.ಆರ್‌.ಶೆಟ್ಟಿ ಫೌಂಡೇಶನ್, ಎಸ್‌.ಎಸ್‌.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ ಬ್ಲಡ್ ಬ್ಯಾಂಕ್ ಹಾಗೂ ಎಂ.ಎಮ್‌..ಜೋಶಿ ಐ ಫೌಂಡೇಶನ್ ಹುಕ್ಕೇರಿ ಶಾಖೆ ಆಶ್ರಯದಲ್ಲಿ ರಕ್ತದಾನ ಶಿಬಿರ ಮತ್ತು ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.  

 ಉತ್ತಮ ಗುರಿಯೊಂದಿಗೆ ಸೇವಾ ಮನೋಭಾವನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಗುರಿಯೊಂದಿಗೆ ಸಮಾಜಪರ ಕಾರ್ಯಕೈಗೊಂಡ ರವಿಂದ್ರ ಶೆಟ್ಟಿ ಅವರ ಕಾರ್ಯಗಳು ಅಜರಾಮರ ಎಂದರು.  

ಸಿ.ಆರ್‌.ಶೆಟ್ಟಿ ಫೌಂಡೇಶನ್ ಎಸ್‌.ಕೆ.ಪಬ್ಲಿಕ್ ಸ್ಕೂಲ್ ಚೇರಮನ್ ಪಿಂಟು ಶೆಟ್ಟಿ  ಮಾತನಾಡಿ ನಮ್ಮ ತಂದೆಯೇ ನಮಗೆ ಹಿರೋ. ಅವರ ಮಾರ್ಗದರ್ಶನದಲ್ಲಿ ಪೌಂಡೇಶನ ವತಿಯಿಂದ ಈಗಾಗಲೇ ಗ್ರಾಮೀಣ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕ್ರೀಡಾ ಸಲಕರಣೆಗಳ ವಿತರಣೆ, ಸಸಿ ನೆಡುವುದು, ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಸಿ.ಆರ್‌.ಫೌಂಡೇಶನ್‌ನಿಂದ ಉಚಿತ ಚಿಕಿತ್ಸೆ ಮತ್ತು ನೆರವು ನೀಡಲಾಗುವುದು ಹೀಗೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 

ಹಿರಿಯ ನ್ಯಾಯವಾದಿ ರಾಮಚಂದ್ರ ಜೋಶಿ, ಮಾತನಾಡಿ ವಿದ್ಯಾದಾನ, ನೇತ್ರದಾನ ರಕ್ತದಾನ ತ್ರೀವೇಣಿಯು ಸಿ.ಆರ್ ಶೆಟ್ಟಿ ಫೌಂಡೇಶನ್ ಮೂಲಕ ಸಮಾಜಪರ ಕಾರ್ಯ ನಡೆಯಬೇಕು ಎಂದರು  

ಸಿ.ಎಸ್‌.ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಹಿರಿಯ ನ್ಯಾಯವಾದಿ ಅನಿಲ ಶೆಟ್ಟಿ ಮಾತನಾಡಿ, ನಮ್ಮ ತಂದೆ ರವೀಂದ್ರ ಶೆಟ್ಟಿ ಅವರ ಪುಣ್ಯಾರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಏರಿ​‍್ಡಸಿದ ವಿವಿಧ ಶಿಬಿರದಲ್ಲಿ  ಪಾಲ್ಗೊಂಡಿರುವ ಜನತೆಗೆ ಕೃತಜ್ಞತೆ ಎಂದರು.   

ಮಾತೋಶ್ರೀ ನೀಲಾಂಬಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್‌.ಬಿ ಬುರ್ಜಿ ನೇತ್ರ ತಜ್ಞ ಇಂದ್ರಜೀತ ಶಿಂದೆ, ಶೀಮಾ ಶೆಟ್ಟಿ, ಸಾನ್ವಿ ಶೆಟ್ಟಿ ಸುಜಾತ ಶೆಟ್ಟಿ ಮಾತನಾಡಿದರು.  

ಪುಣೆ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸತೀಶ ಘಾಳಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸರ್ವ ಮಂಗಳ ಕಮತಗಿ, ಮಹಾವೀರ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಕಾಂಗ್ರೆಸ್ ಘಟಕಧ್ಯಾಕ್ಷ ವಿಜಯ ರವದಿ, ಪರಗೌಡ ಪಾಟೀಲ, ಎಸ್‌.ಕೆ.ಪಬ್ಲಿಕ್ ಸ್ಕೂಲ ನಿರ್ದೇಶಕ ಆನಂದ ಪಟ್ಟಣಶೆಟ್ಟಿ, ಸುಹಾಸ ನೂಲಿ, ಓಂಕಾರ ಹೆದ್ದೂರಶೆಟ್ಟಿ, ಸುಹಾಸ ನೂಲಿ, ಅಪ್ಪು ತುಬಚಿ, ಮುಖಂಡರಾದ ಪ್ರಭು ಸಾಂಬರೆ, ಮಹಾಂತೇಶ ವಸ್ತದ, ಬಸವರಾಜ ಗಂಧ, ಪುರಸಭೆ ಮಾಜಿ ಉಪಾಧ್ಯಕ್ಷರಾದ ಆನಂದ ಗಂಧ, ವಿರೇಶ ಗಜಬರ, ಮಹಾಂತೇಶ ಹಿರೇಮಠ, ಬಿ.ಎಸ್‌.ಪಾಟೀಲ, ದಯಾನಂದ ಹಿರೇಮಠ, ಎ.ಬಿ.ಪಾಟೀಲ, ಶಂಕರ ಅಲಗರಾಹುತ ಮತ್ತಿತರರು ಉಪಸ್ಥಿತರಿದ್ದರು.  

ಪ್ರಾಂಶುಪಾಲ ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಡ್ ಕಾಲೇಜಿನ ಪ್ರಾಚಾರ್ಯ ಎಸ್‌.ಆರ್‌.ಗಸ್ತಿ ನಿರೂಪಿಸಿದರು. ವಿರೇಶ ಗಜಬರ ವಂದಿಸಿದರು. 

ಕಣ್ಣಿನ ಹಾಗೂ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.