ಮುಂಡಗೋಡ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್

ಮುಂಡಗೋಡ 17:ಮುಂಡಗೋಡ ನ್ಯಾಯಾಲಯದಲ್ಲಿ ದಿನಾಂಕ 16-03-2024 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಯಿತು. ಸದ್ರಿ ಲೋಕ್ ಅದಾಲತ್ನಲ್ಲಿ ನ್ಯಾಯಿಕ ಸಂಧಾನಕಾರರಾಗಿ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ವಿನೋದ ಬಾಳಾನಾಯ್ಕ ರವರು ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ಶ್ರೀ ವಿರೇಶ್ ಅರಳಿಕಟ್ಟಿ ವಕೀಲರು ಹಾಜರಿದ್ದರು ಸದ್ರಿ ಲೊಕ್ ಆದಾಲತ್ನಲ್ಲಿ 18 ಚೆಕ್ ಬೌನ್ಸ್‌ ಪ್ರಕರಣಗಳು, 03 ಮೂಲದಾವಾ ಪ್ರಕರಣಗಳು, 16 ಅಮಲ್ಟಾರಿ ಪ್ರಕರಣಗಳು 1 ಕ್ರಿ ಮಿಸಿಲೆನಿಯಸ್ ಪ್ರಕರಣ, 32 ಜನನ-ಮರಣ ಪ್ರಕರಣಗಳು, 35 ಪೊಲೀಸ್ ಪ್ರಕರಣಗಳು ಸೇರಿ ಒಟ್ಟ 108 ಪ್ರಕರಣಗಳು ಇತ್ಯರ್ಥಗೊಂಡು ರೂ. 39,72,199-00 ಅರ್ಜಿದಾರರಿಗೆ ವಸೂಲಾಗಿರುತ್ತದೆ. ಹಾಗು 19 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡು ರೂ 12,97,500-00 ಅರ್ಜಿದಾರರಿಗೆ ವಸೂಲಾಗಿರುತ್ತದೆ. ಮತ್ತು 2023 ರಲ್ಲಿ ಭಾಗ್ಯಲಕ್ಷ್ಮೀ ಪರಸಪ್ಪ ಕೋಣನವರ, ಸಾಕೀನ ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರು ಮುಂಡಗೋಡ ನ್ಯಾಯಾಲಯದಲ್ಲಿ ಮುಂಡಗೋಡ ತಾಲೂಕೀನ ನಂದಿಪುರ ಗ್ರಾಮದ ನೀವಾಸಿಯಾದ ಶ್ರೀ ಪರಸಪ್ಪ ಕೋಣನವರ ರವರ ಮೇಲೆ ಕೌಟುಂಬಿಕ ದೌರ್ಜನ್ಯ ದ ಕಾಯ್ದೆ ಅಡಿಯಲ್ಲಿ ಮಹಿಳೆಯರನ್ನು ರಕ್ಷಿಸುವ ಅಧಿನಿಯಮ ಪ್ರಕರಣನ್ನು ದಾಖಲಿಸಿದ್ದರು, ಸದ್ರಿ ಪ್ರಕರಣವು ಇಂದು ನಡೆದ ಲೊಕ್ ಆದಾಲತ್ನಲ್ಲಿ ಗೌರವಾನ್ವಿತ ನ್ಯಾಯಾಧೀಶರ ಅಧ್ಯಕತೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ, ದಂಪತಿಗಳನ್ನು ಒಂದು ಮಾಡಿದರು. ಅರ್ಜಿದಾರರ ಪರ ಶ್ರೀಮತಿ ಜ್ಯೋತಿ ತಲ್ಲೂರ ಹಾಗೂ ಎನ್‌. ಎ.ನಿಂಬಾಯಿ ವಕೀಲರು ಹಾಜರಿದ್ದರು