ದಂಡಕಾರಣ್ಯದಲ್ಲಿ ಅಪರೂಪಕ್ಕೆ ಕತ್ತೆಕಿರುಬದ ದರ್ಶನ
Rare sighting of a hyena in Dandakaranya
ಕಾರವಾರ 05: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಡುಗಳಲ್ಲಿ ಅಪರೂಪಕ್ಕೆ ಕಾಣಸಿಗುವ ಕತ್ತೆಕಿರುಬದ ದರ್ಶನವಾಗಿದೆ. ಕೆಲವೇ ದಿನಗಳ ಹಿಂದೆ ಕುಳಗಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದ್ದು ಸುದ್ಧಿಯಾಗಿತ್ತು. ಆದರೆ ಈ ಹಿಂದೆ ದಾಂಡೇಲಿಯ ಕಾಡುಗಳಲ್ಲಿ ಕತ್ತೆಕಿರುಬವನ್ನು ಯಾರು ನೋಡಿದ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಗೆ ಕತ್ತೆಕಿರುಬ ಹೇಗೆ ಬಂತು ಎನ್ನುವದು ಯಕ್ಷಪ್ರಶ್ನೆಯಾಗಿದೆ.
ಇದೀಗ ಬುಧವಾರ ಬೆಳಗಿನ ಜಾವ ಗಣೇಶ ಗುಡಿಯ ಸೇತುವೆ ಬಳಿ ಕತ್ತೆಕಿರುಬ ವೊಂದು ಕಾಣಿಸಿಕೊಂಡಿದ್ದು, ಸದ್ಯ ಮೊಬೈಲ್ ನಲ್ಲಿ ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಒಂದೆಡೆ ಹುಲಿ, ಚಿರತೆಗಳ ದರ್ಶನವಾದರೆ ಇನ್ನೊಂದಡೆ ಕತ್ತೆಕಿರುಬ ಕಾಣಿಸಿಕೊಂಡಿದೆ. ಕೊಳೆತ ಪ್ರಾಣಿ ತಿಂದು ಕಾಡು ಸ್ವಚ್ಛ ಮಾಡುವ ಈ ಪ್ರಾಣಿ ಮನುಷ್ಯನಿಗೆ ತೀರಾ ಅಪಾಯಕಾರಿಯಲ್ಲ. ಆದರೆ ಜಾಗೃತೆ ಯಿಂದಿರುವದು ಒಳಿತು. ಬರಲಿರುವ ದಿನಗಳಲ್ಲಿ ಪ್ರವಾಸಿ ಪ್ರಾಣಿಪ್ರಿಯರಿಗೆ ಅಪರೂಪದ ಕತ್ತೆಕಿರುಬಗಳ ದರ್ಶನವಾಗಲೂ ಬಹುದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 