ಗಾನಕೋಗಿಲೆ ಪ್ರಶಸ್ತಿಗೆ ರಮೇಶ ಕೆಂಚಪ್ಪ ಮುರಾಳ್ ಆಯ್ಕೆ
Ramesh Kenchappa Mural selected for the Ganakogile Award
ದೇವರಹಿಪ್ಪರಗಿ, ಸೆ. 15: ತಾಲೂಕಿನ ಪಡಗಾನೂರ ಗ್ರಾಮದ ಗಾಯಕ ರಮೇಶ ಕೆಂಚಪ್ಪ ಮುರಾಳ್ ಅವರು ಈ ಸಾಲಿನ ಗಾನಕೋಗಿಲೆ ಪ್ರಶಸ್ತಿಗೆ ಭಾಜನರಾಗಿ ಗೌರವಿಸಲ್ಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದ ಸುಕ್ಷೇತ್ರ ಸೋಮನಾಥ ಮುತ್ಯಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಬಸರಕೋಡ ಪವಾಡ ಬಸವೇಶ್ವರ ಮಹಾಪುರಾಣ ಮಂಗಲ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಾನಕೋಗಿಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ರಮೇಶ ಕೆಂಚಪ್ಪ ಮುರಾಳ್ ಅವರನ್ನು ಗಾನಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ತಮ್ಮ ಗಾಯನದ ಮೂಲಕ ಜನಮನ ಗೆದ್ದಿರುವ ರಮೇಶ ಮುರಾಳ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಗಾಯನಕ್ಕೆ ಅಭಿಮಾನಿಗಳ ಬಳಗವಿದ್ದು, ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಾರ್ಯಕ್ರಮದಲ್ಲಿ ಪುರಾಣಿಕರಾದ ನಾಗಬಸಯ್ಯ ಶಾಸ್ತ್ರಿಗಳು, ತಬಲಾ ವಾದಕ ಸಿದ್ದು ಹೂಗಾರ, ಸಂಗೀತ ಗಾಯಕರಾದ ಯಲ್ಲಾಲಿಂಗ ಮುತ್ಯಾ, ಬೆಕಿನಾಳದ ಮಹೇಶ ಮುತ್ಯಾ, ಪರಶುರಾಮ ಪೂಜಾರಿ, ಬಸನಗೌಡ ಪಾಟೀಲ, ಅಧ್ಯಕ್ಷರಾದ ಎಸ್.ಬಿ. ಕಲ್ಲೂರ, ಶಾಂತು ಪೂಜಾರಿ ಶರಣಗೌಡ, ನರಸಲಗಿ, ಸೋಮನಾಥ ಕಲ್ಲೂರ, ನೀಲಪ್ಪ ಮಂತ್ರಿ, ಗುರುನಗೌಡ ಪಾಟೀಲ ಸೇರಿದಂತೆ ಸಮಿತಿ ಸರ್ವಸದಸ್ಯರು ಹಾಗೂ ಜಾಯವಾಡಗಿ ಮಠದ ಹಿರಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 